ಬೆಂಗಳೂರಿಂದ ಸೈಕಲ್‌ನಲ್ಲೇ ಬಂದ!

ಮಂಗಳೂರು: ನಗರದ ಯುವಕನೊಬ್ಬ ಬೆಂಗಳೂರಿನಿಂದ ಮಂಗಳೂರಿಗೆ ಸೈಕಲ್ ತುಳಿದು ಬಂದು ಮತ ಚಲಾಯಿಸಿದರು.

ವಾಮಂಜೂರು ಮೂಲದ ಶೇಖರ್-ನೀಲಾ ದಂಪತಿ ಪುತ್ರ ಅನಿಕೇತ್ ಜೆ.(29) ಸೈಕಲ್‌ನಲ್ಲಿ ಆಗಮಿಸಿದವರು. ಬೆಂಗಳೂರಿನಿಂದ ಮಂಗಳೂರಿಗೆ 360 ಕಿ.ಮೀ.ದೂರವಿದೆ. ಬುಧವಾರ ಮುಂಜಾನೆ 4.45ಕ್ಕೆ ಬೆಂಗಳೂರಿನಿಂದ ಪಯಣ ಆರಂಭಿಸಿ, ಗುರುವಾರ ಸಾಯಂಕಾಲ ಮಂಗಳೂರಿಗೆ ತಲುಪಿದರು. ‘ನಿಮ್ಮ ಮತ ನಿಮ್ಮ ದನಿ’ ಎಂಬ ಒಕ್ಕಣೆ ಇರುವ ಧ್ವಜವನ್ನು ಸೈಕಲ್‌ನಲ್ಲಿ ಇರಿಸಿದ್ದಾರೆ.

Leave a Reply

Your email address will not be published. Required fields are marked *