More

    ಮಂಗಳೂರು ಬಾಂಬ್ ಪ್ರಕರಣ| ತಾಯಿ ಸತ್ತಾಗಲೂ ಮನೆಗೆ ಬರಲಿಲ್ಲ ಆದಿತ್ಯ ರಾವ್

    ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದ ಆರೋಪಿ, ಸಹೋದರ ಆದಿತ್ಯ ರಾವ್ ಬೆಂಗಳೂರು ಪೊಲೀಸರಿಗೆ ಶರಣಾಗಿರುವುದು ಮಾಧ್ಯಮಗಳಿಂದ ತಿಳಿಯಿತು. ಆತ ಈ ಹಿಂದೆಯೂ ಬೆದರಿಕೆ ಕರೆ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ.

    ಪ್ರಕರಣಗಳ ತನಿಖೆಗೆ ಮನಮಂದಿ ಪೂರ್ಣ ರೀತಿಯಲ್ಲಿ ಸಹಕಾರ ನೀಡುತ್ತೇವೆ ಎಂದು ಕಿರಿಯ ಸಹೋದರ, ಕೆನರಾ ಬ್ಯಾಂಕ್ ಉದ್ಯೋಗಿ ಅಕ್ಷತ್ ರಾವ್ ಹೇಳಿದರು. ನಗರದ ಚಿಲಿಂಬಿ ಎಂಬಲ್ಲಿರುವ ಕೆನರಾ ಬ್ಯಾಂಕ್ ಉದ್ಯೋಗಿಗಳ ಅಪಾರ್ಟ್​ವೆುಂಟ್ ಬಳಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಣ್ಣನನ್ನು ಸರಿದಾರಿಗೆ ತರಲು ಬಹಳಷ್ಟು ಪ್ರಯತ್ನ ಮಾಡಿದ್ದೆವು. ಆದರೆ ಆತ ಸರಿಯಾಗಲಿಲ್ಲ. ತಾಯಿ ನಿಧನ ಹೊಂದಿದಾಗ ಆತ ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ. ಕರೆ ಮಾಡಿ ವಿಷಯ ತಿಳಿಸಿದ್ದೆವು. ಹಿರಿಯ ಮಗನಾಗಿ ಅಂತಿಮ ವಿಧಿವಿಧಾನ ಪೂರೈಸಲೂ ಬರಲಿಲ್ಲ. 3 ವರ್ಷಗಳಿಂದ ಮನೆಯವರ ಸಂಪರ್ಕದಿಂದ ಆತ ದೂರ ಇದ್ದಾನೆ ಎಂದು ಅಕ್ಷತ್ ಹೇಳಿದರು. ಆತ ಈವರೆಗೆ ಎಲ್ಲಿದ್ದಾನೆಂದು ಗೊತ್ತಿರಲಿಲ್ಲ. ಮಂಗಳೂರಿನಲ್ಲೇ ಇದ್ದ ಎನ್ನುವ ವಿಚಾರ ನಿನ್ನೆಯೇ ಗೊತ್ತಾಯಿತು. ನಾವು ಮೂಲತಃ ಮಣಿಪಾಲದವರು. ತಂದೆ ಕೃಷ್ಣಮೂರ್ತಿ ಬ್ಯಾಂಕ್ ಉದ್ಯೋಗಿಯಾಗಿದ್ದ ಕಾರಣ ವಿವಿಧ ಕಡೆಗಳಲ್ಲಿ ವಾಸ್ತವ್ಯ ಹೂಡಿದ್ದೇವೆ. ನಾನು ಅಣ್ಣ 8ನೇ ತರಗತಿ ತನಕ

    ಮಾತ್ರ ಜತೆಗಿದ್ದೆವು. ಬಳಿಕ ಅವನು ಮತ್ತು ನಾನು ಬೇರೆ ಬೇರೆ ಹಾಸ್ಟೆಲ್​ಗಳಲ್ಲಿ ಓದಿದ್ದೆವು. ಆತ ಎಂಬಿಎ, ಬಿಇ ಪದವೀಧರ. ಆದರೆ ಯಾಕೆ ಹೀಗೆ ಮಾಡಿದ್ದಾನೆ ಎಂಬುದು ನಮಗೂ ಗೊತ್ತಾಗುತ್ತಿಲ್ಲ. ಆತನ ದುಷ್ಕೃತ್ಯಕ್ಕೆ ನಾವು ಬೆಂಬಲ ನೀಡುವುದಿಲ್ಲ. ಪೊಲೀಸರಿಗೆ ಎಲ್ಲ ಮಾಹಿತಿ ನೀಡಿದ್ದೇವೆ. ಈ ಹಿಂದೆ ಬಂಧನವಾದಾಗಲೂ ಬಿಡುಗಡೆಗೆ ಪ್ರಯತ್ನ ಮಾಡಿಲ್ಲ. ಆತನನ್ನು ಭೇಟಿಯೇ ಆಗಿಲ್ಲ. ನಮಗೂ ಆತನಿಗೂ ಸಂಬಂಧವಿಲ್ಲ ಎಂದವರು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts