ಏಪ್ರಿಲ್‌ಗೆ ಮಂಗಳೂರು ಏರ್‌ಪೋರ್ಟ್ ಅದಾನಿ ಕೈಗೆ

Latest News

ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಸ್ತವ್ಯ ಹೂಡಿದ ಶಾಲೆಯಲ್ಲಿ ಶಿಕ್ಷಕರಿಂದ ಮಹಾ ಪ್ರಮಾದ

ಚಾಮರಾಜನಗರ: ಸಚಿವರ ಬಳಕೆಗೆಂದು ಮೀಸಲಿಟ್ಟ ಶೌಚಗೃಹವನ್ನು ಶಾಲಾ ಮಕ್ಕಳ ಕೈಯಲ್ಲಿ ಸ್ವಚ್ಛಗೊಳಿಸುವ ಮೂಲಕ ಶಾಲಾ ಶಿಕ್ಷಕರು ಪ್ರಮಾದವೆಸಗಿರುವ ಘಟನೆ ರಾಜ್ಯದ ಗಡಿಭಾಗದ ಶಾಲೆಯೊಂದರಲ್ಲಿ...

ರಾಷ್ಟ್ರ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಡುವ ಧೀರ ಯೋಧರಿಗಾಗಿ “ಐರನ್​ ಮ್ಯಾನ್​” ಉಡುಪು ಅಭಿವೃದ್ಧಿಪಡಿಸಿದ ಯುವಕ!

ವಾರಾಣಸಿ: ಹಾಲಿವುಡ್​ ಐರನ್​ ಮ್ಯಾನ್​ ಚಿತ್ರದಿಂದ ಸ್ಪೂರ್ತಿಗೊಂಡು ವಾರಾಣಸಿಯ ಖಾಸಗಿ ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರು "ಐರನ್​ ಮ್ಯಾನ್​" ಉಡುಪನ್ನು ಅಭಿವೃದ್ಧಿಪಡಿಸಿ ಸುದ್ದಿಯಾಗಿದ್ದಾರೆ. ಎದುರಾಳಿಯೊಂದಿಗೆ ಸೆಣಸಾಡುವ...

ಐಟಿ-ಬಿಟಿ ಅಭಿವೃದ್ಧಿಗೆ ಸರ್ಕಾರದ ಸಹಕಾರ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ, ಬೆಂಗಳೂರು ಟೆಕ್ ಸಮಿಟ್​ಗೆ ಅದ್ದೂರಿ ಚಾಲನೆ

ಬೆಂಗಳೂರು: ಆವಿಷ್ಕಾರ, ಸೇವಾ ಕ್ಷೇತ್ರಗಳ ಜತೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ....

ಬಿಐಎಸ್ ವರದಿ ಆತಂಕಕಾರಿ: ಜಲಮಂಡಳಿಗೆ ತಜ್ಞರ ಸಲಹೆ, ಗುಣಮಟ್ಟದ ನೀರಿಗೆ ನಾಗರಿಕರ ಆಗ್ರಹ

ಬೆಂಗಳೂರು: ಬೆಂಗಳೂರು ಜಲಮಂಡಳಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಶುದ್ಧವಲ್ಲ ಎಂಬುದು ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್) ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ಇದು...

ವೈದ್ಯರಿಂದ ಮಾತೃಹೃದಯದ ಸೇವೆ

ಬೆಳ್ತಂಗಡಿ: ವೈದ್ಯರು ಮಾನವೀಯತೆ ಹಾಗೂ ನಗುಮುಖದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇ ದೇವರ ಸೇವೆಯಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ...

< ವಿಮಾನ ನಿಲ್ದಾಣಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ * ನಿರ್ವಹಣೆ ಕುರಿತು ಮಾಹಿತಿ ಸಂಗ್ರಹ>

ಮಂಗಳೂರು: 2020ರ ಮಾರ್ಚ್- ಏಪ್ರಿಲ್ ತಿಂಗಳ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗಿ ನಿರ್ವಹಣೆಗೆ ಒಳಪಡುವ ಸಾಧ್ಯತೆ ಗೋಚರಿಸಿದೆ.

ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ ನಿರ್ವಹಣೆಗಾಗಿ ವಹಿಸುವ ಕುರಿತು ಕಳೆದ ತಿಂಗಳು ಅಂತಿಮ ಒಪ್ಪಿಗೆ ನೀಡಲಾಗಿತ್ತು. ಅದರ ಬಳಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ ಬುಧವಾರ ಅದಾನಿ ಸಮೂಹದ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದ್ದಾರೆ. ವಿಮಾನ ನಿಲ್ದಾಣದ ನಿರ್ವಹಣೆಯ ಗುತ್ತಿಗೆ ಪಡೆಯುವುದಕ್ಕೆ ಮೊದಲು ಇದರ ಕಾರ್ಯನಿರ್ವಹಣೆ ಹೇಗಿದೆ ಎನ್ನುವುದಕ್ಕಾಗಿ ಈ ಅವಲೋಕನ ನಡೆದಿರಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಾರಂಭದಲ್ಲಿ ಒಟ್ಟು ಆರು ಏರ್‌ಪೋರ್ಟ್‌ಗಳನ್ನು ಖಾಸಗೀಕರಣಗೊಳಿಸಲು ಹೊರಟಿದ್ದ ಕೇಂದ್ರ ಸರ್ಕಾರ, ಕೊನೆಗೆ ಸಂಪುಟ ಸಭೆ ನಡೆಸಿ ಮಂಗಳೂರು ಸೇರಿ ಐದನ್ನು ಮಾತ್ರ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲು ತೀರ್ಮಾನಿಸಿತ್ತು.

ಪ್ರಕ್ರಿಯೆ ಸುದೀರ್ಘ: ಮಂಗಳೂರು ವಿಮಾನ ನಿಲ್ದಾಣದ ಹಸ್ತಾಂತರ ಪ್ರಕ್ರಿಯೆ ವರ್ಷವೇ ತಗುಲಬಹುದು, ಸದ್ಯಕ್ಕೆ ಅದಾನಿ ಪ್ರತಿನಿಧಿಗಳು ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಮಾಹಿತಿಯನ್ನಷ್ಟೇ ಪಡೆದು ಹೋಗುತ್ತಿದ್ದಾರೆ. ವಿಮಾನ ನಿಲ್ದಾಣದ ಆಸ್ತಿಗಳ ಪರಿಶೀಲನೆ, ಸಿಬ್ಬಂದಿಯ ಕೆಲಸ ಕಾರ್ಯ, ವಿಮಾನ ನಿಲ್ದಾಣದ ಆದಾಯದ ಮೂಲ, ಏರ್‌ಲೈನರ್ ಸಂಸ್ಥೆಗಳು, ಭದ್ರತಾ ವ್ಯವಸ್ಥೆ ಇತ್ಯಾದಿಗಳ ಪರಿಶೀಲನೆಗಾಗಿ ಪ್ರತಿನಿಧಿಗಳು ಆಗಮಿಸಿರಬಹುದು. ಅವರ ಮಾಹಿತಿ ಪ್ರಕಾರ ಮಾರ್ಚ್- ಏಪ್ರಿಲ್ ವೇಳೆಗಷ್ಟೇ ವಿಮಾನ ನಿಲ್ದಾಣದ ಹಸ್ತಾಂತರ ನಡೆಯಬಹುದು ಎಂದು ಮೂಲಗಳು ತಿಳಿಸುತ್ತವೆ.

ಸಿಬ್ಬಂದಿಗೆ ಸಮಸ್ಯೆಯಾಗದು:  ಮಂಗಳೂರು ಏರ್‌ಪೋರ್ಟ್ ಖಾಸಗಿಯವರಿಗೆ ಹಸ್ತಾಂತರವಾದರೂ ಮೊದಲ ಮೂರು ವರ್ಷ ಕೆಲಸದಲ್ಲಿ ಯಾವುದೇ ಬದಲಾವಣೆಯಾಗದು. ಆ ಬಳಿಕ ಅದಾನಿ ಸಮೂಹಕ್ಕೆ ಸೇರುವ ಆಫರ್ ಏರ್‌ಪೋರ್ಟ್ ಸಿಬ್ಬಂದಿಗೆ ನೀಡಬಹುದು. ಆಗ ಆಸಕ್ತಿ ಇದ್ದರೆ ಅದಾನಿ ಸೇರಬಹುದು ಅಥವಾ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲೇ ಇರಬಹುದು. ಬೇರೆ ಕಡೆಗೆ ವರ್ಗಾವಣೆ ಪಡೆದುಕೊಳ್ಳಲು ಅವಕಾಶ ಸಿಗಬಹುದು ಎನ್ನುತ್ತವೆ ಮೂಲಗಳು. ಏರ್‌ಪೋರ್ಟ್ ಹಸ್ತಾಂತರವಾದ ಬಳಿಕ ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸುಪರ್ದಿಯಲ್ಲಿರುವ ವಿಮಾನ ನಿಲ್ದಾಣದ ಪೂರ್ಣ ನಿರ್ವಹಣೆ ಅದಾನಿ ಪಾಲಾಗಲಿದೆ. ಆದರೆ ನ್ಯಾವಿಗೇಶನ್ ಮತ್ತು ಏರ್‌ಟ್ರಾಫಿಕ್ ಕಂಟ್ರೋಲ್ ಮಾತ್ರ ಪ್ರಾಧಿಕಾರದ ಕೈನಲ್ಲಿ ಇರುತ್ತದೆ. ಏರ್‌ಪೋರ್ಟ್ ನಿರ್ದೇಶಕರ ಹುದ್ದೆಯನ್ನೂ ಅದಾನಿ ಕಂಪನಿಯ ಉನ್ನತ ಅಧಿಕಾರಿಗಳು ವಹಿಸಿಕೊಳ್ಳುವ ಸಾಧ್ಯತೆ ಇದೆ.

ಅದಾನಿ ಕಂಪನಿ ಅಧಿಕಾರಿಗಳು ಬಂದು ಪರಿಶೀಲಿಸಿ ಹೋಗಿರುವುದು ಹೌದು. ಆದರೆ ಹಸ್ತಾಂತರದ ವಿಚಾರ ಈಗಲೇ ಹೇಳುವುದು ಕಷ್ಟ. ಅದೇನಿದ್ದರೂ ನಾಗರಿಕ ವಿಮಾನಯಾನ ಸಚಿವಾಲಯದ ಮಹಾನಿರ್ದೇಶಕರಿಂದ ಸೂಚನೆ ಬಂದ ಬಳಿಕವೇ ಗೊತ್ತಾಗಬೇಕಷ್ಟೇ.
– ವಿ.ವಿ.ರಾವ್, ನಿರ್ದೇಶಕ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

- Advertisement -

Stay connected

278,592FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...