17.8 C
Bengaluru
Wednesday, January 22, 2020

ಸಹಜತೆಯತ್ತ ಮಂಗಳೂರು ಏರ್‌ಪೋರ್ಟ್

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಮಂಗಳೂರು:  ದುಬೈ-ಮಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ರನ್‌ವೇಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿ ಟರ್ಮಿನಲ್ ಕಡೆ ಬರುತ್ತಿದ್ದ ವೇಳೆ ಟ್ಯಾಕ್ಸಿವೇನಿಂದ ಜಾರಿದ್ದ ಪ್ರಕರಣದ ಬಳಿಕ, ಸೋಮವಾರ ವಿಮಾನ ನಿಲ್ದಾಣ ಸಹಜತೆಗೆ ಮರಳಿದೆ.

ಅವಘಡಕ್ಕೀಡಾಗಿದ್ದ ವಿಮಾನವನ್ನು ಏರ್ ಇಂಡಿಯಾದ ತಜ್ಞರ ತಂಡ ಪರಿಶೀಲಿಸಿದ್ದು, ಸೋಮವಾರ ಮಧ್ಯಾಹ್ನ ಮಂಗಳೂರು ಏರ್‌ಪೋರ್ಟ್‌ನ ಏಪ್ರನ್ ಪ್ರದೇಶದಲ್ಲಿ (ವಿಮಾನಗಳನ್ನು ನಿಲ್ಲಿಸುವ ಜಾಗ)ಇರಿಸಲಾಗಿದೆ. ಪರಿಶೀಲನೆ ನಡೆಸಲಾಗುತ್ತಿದ್ದು, ಆಗಿರುವ ಹಾನಿ ದುರಸ್ತಿಪಡಿಸಿ ಒಂದೆರಡು ದಿನದಲ್ಲಿ ಹಾರಾಟಕ್ಕೆ ಅಣಿಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಭಾನುವಾರ ಸಾಯಂಕಾಲ 5.40ಕ್ಕೆ ರನ್ ವೇ ಮೇಲೆ ಜಾರಿ ಬದಿಯಲ್ಲಿ ಕೆಸರು ಪ್ರದೇಶಕ್ಕೆ ನುಗ್ಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ 384 ವಿಮಾನ ಟೈರ್ ಹುಗಿದ ಕಾರಣ ವೇಗ ಕಳೆದುಕೊಂಡು ಸ್ಥಗಿತಗೊಂಡಿತ್ತು. ಅದರಲ್ಲಿದ್ದ 183 ಪ್ರಯಾಣಿಕರು, 6 ಸಿಬ್ಬಂದಿ ಅಪಾಯವಿಲ್ಲದೆ ಪಾರಾಗಿದ್ದರು.

ಅವಘಡಕ್ಕೀಡಾದ ವಿಮಾನವನ್ನು ಸೋಮವಾರ ಸಾಯಂಕಾಲ 3.30-4ರ ಮಧ್ಯೆ ವಿಮಾನ ನಿಲ್ದಾಣದ ಏಪ್ರನ್‌ಗೆ ತರಲಾಯಿತು. ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಇಂಜಿನಿಯರ್‌ಗಳಿಗೆ ಅಗತ್ಯ ನೆರವು ಒದಗಿಸಲಾಯಿತು. ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಇಲ್ಲದ ಅವಧಿ ಗುರುತಿಸಿ ಆ ವೇಳೆ ಸ್ಥಳಾಂತರ ಕಾರ್ಯ ನಡೆಯಿತು. ಘಟನೆ ಕುರಿತು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿ ನೀಡಿದ್ದು, ಡಿಜಿಸಿಎಯಿಂದ ತನಿಖೆಗಾಗಿ ತಂಡ ಆಗಮಿಸಿದೆ. ಡಿಜಿಸಿಎ ತನ್ನದೇ ನಿಯಮಾವಳಿ ಪ್ರಕಾರ ತನಿಖೆ ನಡೆಸುತ್ತದೆ ಎಂದು ಏರ್‌ಪೋರ್ಟ್ ನಿರ್ದೇಶಕರು ತಿಳಿಸಿದರು.

ತಡರಾತ್ರಿಯಿಂದಲೇ ಸಹಜ ಸ್ಥಿತಿ
ಭಾನುವಾರ ಘಟನೆ ಬಳಿಕ ಹಲವು ಗಂಟೆಗಳ ಕಾಲ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳನ್ನು ಬೆಂಗಳೂರು, ಕೋಝಿಕೋಡ್‌ಗೆ ತಿರುಗಿಸಲಾಗಿತ್ತು. ತಡರಾತ್ರಿ ವೇಳೆ ಅವು ಮಂಗಳೂರಿಗೆ ಆಗಮಿಸಿದವು. ತಡರಾತ್ರಿಯಿಂದಲೇ ವಿಮಾನ ನಿಲ್ದಾಣ ಸಹಜತೆಗೆ ಬಂದಿದ್ದು, ಬೆಳಗ್ಗಿನಿಂದಲೂ ಬೆಂಗಳೂರು, ಮುಂಬೈ, ದುಬೈಗೆ ಹೋಗುವ ಬರುವ ವಿಮಾನಗಳು ಎಂದಿನಂತೆಯೇ ಕಾರ್ಯನಿರ್ವಹಿಸಿವೆ ಎಂದು ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ‘ವಿಜಯವಾಣಿ’ಗೆ ತಿಳಿಸಿದರು.
ಇನ್ನೊಂದೆಡೆ, ನಿಲ್ದಾಣ ಕಾರ್ಯಾಚರಣೆಯನ್ನು ಭಾನುವಾರ ಸಾಯಂಕಾಲದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರಿಂದ ಅನೇಕ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಸಾಯಂಕಾಲ ಬೇರೆಡೆಗೆ ತೆರಳಲು ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಡುವಂತಾಯಿತು. ಈ ಕುರಿತು ಹಲವು ಪ್ರಯಾಣಿಕರು ಟ್ವಿಟರ್, ಫೇಸ್‌ಬುಕ್‌ಗಳಲ್ಲು ಅಳಲು ತೋಡಿಕೊಂಡರು.

ಲ್ಯಾಂಡಿಂಗ್ ವೈಫಲ್ಯವಲ್ಲ
ಭಾನುವಾರದ ವಿದ್ಯಮಾನವನ್ನು ಸತ್ಯಾಂಶ ಗೊತ್ತಿಲ್ಲದೆ ಅನೇಕರು 2010ರ ದುರಂತಕ್ಕೆ ಹೋಲಿಸುತ್ತಿರುವುದು ಕಂಡು ಬಂದಿದೆ.
2010ರಲ್ಲಿ ಏರ್ ಇಂಡಿಯಾ ವಿಮಾನ ನಿಗದಿತ ಸ್ಥಳಕ್ಕಿಂತಲೂ ಮುಂದಕ್ಕೆ ಭೂಸ್ಪರ್ಶವಾಗಿ (ಓವರ್ ಶೂಟ್) ರನ್‌ವೇಯಿಂದಲೂ ಸಾಕಷ್ಟು ಮುಂದಕ್ಕೆ ಜಾರಿ ಗುಡ್ಡದಿಂದ ಕೆಳಕ್ಕೆ ಉರುಳಿತ್ತು. ಆದರೆ ಭಾನುವಾರ ಇಂತಹ ಘಟನೆ ಆಗಿಲ್ಲ. ವಿಮಾನ ಯಾವುದೇ ಸಮಸ್ಯೆಯಿಲ್ಲದೆ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಆದರೆ, ರನ್ ವೇಯ ಕೊನೆಯಿಂದ ಮರಳಿ ಟರ್ಮಿನಲ್‌ಗೆ ಟ್ಯಾಕ್ಸೀಯಿಂಗ್ ಮಾಡುತ್ತಾ ಬರುವಾಗ ರನ್‌ವೇಯಿಂದ ಜಾರಿ ಕೆಸರು ಪ್ರದೇಶಕ್ಕೆ ಹೋಗಿ ಸಿಲುಕಿಕೊಂಡಿತ್ತು. ರನ್‌ವೇಯ ಒಂದು ಕೊನೆಯಿಂದ ಟರ್ಮಿನಲ್‌ವರೆಗೆ ಸುಮಾರು 500 ಮೀಟರ್ ದೂರವಿರುತ್ತದೆ. ರನ್ ವೇಯಿಂದ ಟರ್ಮಿನಲ್ ಕಡೆಗೆ ತಿರುಗುವ ಕಡೆಯಲ್ಲಿ ಪೈಲಟ್ ಹತೋಟಿ ತಪ್ಪಿ ವಿಮಾನ ಕೆಸರು ಪ್ರದೇಶಕ್ಕೆ ನುಗ್ಗಿತ್ತು ಎಂದು ಏರ್‌ಪೋರ್ಟ್ ಮೂಲಗಳು ತಿಳಿಸಿವೆ.

ಯಾಕಾಗಿ ತಡವಾಯ್ತು?
ಅವಘಡ ನಡೆದ ಬಳಿಕ ಡಿಜಿಸಿಎ ನಿಯಮಾವಳಿಯಂತೆ ಘಟನಾ ಸ್ಥಳವನ್ನು ಅಳತೆ ಮಾಡಿ, ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟನೆ ಪಡೆದುಕೊಂಡ ಬಳಿಕವಷ್ಟೇ ರನ್‌ವೇ ಪ್ರದೇಶವನ್ನು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ವ್ಯವಸ್ಥೆಯಂತೆ ಲ್ಯಾಂಡಿಂಗ್‌ಗೆ ಬಿಟ್ಟುಕೊಡಬೇಕಾಗುತ್ತದೆ. ಇದಕ್ಕಾಗಿ ಕೆಲವು ಗಂಟೆಗಳ ಕಾಲ ತಗಲಿದೆ, ಹಾಗಾಗಿ ಹಲವು ವಿಮಾನಗಳ ನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಆ ಬಳಿಕ ವಿಮಾನ ಹಾರಾಟ ಸಹಜತೆಗೆ ಬಂದಿದೆ.

ವಿಮಾನ ನಿಲ್ದಾಣ ದೂಷಿಸಬೇಡಿ ಎಂದ ಖಾದರ್
ಘಟನೆ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವನ್ನು ಒತ್ತಾಯಿಸಿದ್ದೇನೆ, ಇದರಿಂದ ಕಾರಣಗಳು ಹೊರಬರಲಿವೆ, ಈ ಘಟನೆಗಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ದೂಷಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪೈಲಟ್‌ನ ತಪ್ಪುಗಳಿಂದಾಗಿ ಆಗಿರಬಹುದು, ಈ ವಿಮಾನ ನಿಲ್ದಾಣ ಸುಗಮವಾಗಿ ಎಷ್ಟೋ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವಾಗ ಅದನ್ನು ದೂರಬಾರದು. ರನ್ ವೇ ವಿಸ್ತರಣೆಗೆ ಬೇಕಾದ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಬದ್ಧ. ವಿಸ್ತರಣೆಯಾದರೆ ದೊಡ್ಡ ಜೆಟ್ ವಿಮಾನಗಳ ನಿರ್ವಹಣೆಗೆ ಅನುಕೂಲವಾಗಲಿದೆ. ಆದರೆ ಇದಕ್ಕೆ ಮೊದಲು ವಿಮಾನ ನಿಲ್ದಾಣದ ಖಾಸಗೀಕರಣ ಪ್ರಕ್ರಿಯೆ ಕುರಿತು ಕೇಂದ್ರ ಸರ್ಕಾರದ ನಿರ್ಧಾರ ಸ್ಪಷ್ಟಗೊಳ್ಳಬೇಕಿದೆ ಎಂದರು.

ಅದಾನಿ ಕಂಪನಿ ಹೇಳಿಕೆ
ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್ ನಿರ್ವಹಿಸುತ್ತಿಲ್ಲ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ. ಭಾನುವಾರ ವಿಮಾನ ಸ್ಕಿಡ್ ಆಗಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಕಳಪೆ ನಿರ್ವಹಣೆ ಕುರಿತು ಗಮನ ಹರಿಸಬೇಕು. ಇದರ ಜವಾಬ್ದಾರಿಯನ್ನು ಅದಾನಿ ಹೊರುವುದೇ ಅಥವಾ 2010ರ ದುರಂತ ಮತ್ತೊಮ್ಮೆ ಆಗಬೇಕೆಂದು ಕಾಯಬೇಕೇ ಎಂದು ಜುನೈಜ್ ಮೊಹಮ್ಮದ್ ಎಂಬವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಅದಾನಿ ಗ್ರೂಪ್, ನಾವಿನ್ನೂ ವಿಮಾನ ನಿಲ್ದಾಣದ ನಿರ್ವಹಣೆ ವಹಿಸಿಕೊಂಡಿಲ್ಲ. ಒಪ್ಪಿಗೆ ಪತ್ರ ಇನ್ನೂ ಲಭಿಸಿಲ್ಲ ಎಂದಿದೆ.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...