ಗುಳೇದಗುಡ್ಡ : ಶಕ್ತಿದೇವತೆಗಳಲ್ಲಿ ಒಂದಾದ ಸಮೀಪದ ಮಂಗಳಗುಡ್ಡ ಶ್ರೀ ಮಂಗಳಾದೇವಿ ಜಾತ್ರಾ ಮಹೋತ್ಸವ ಮಾ.28ರಿಂದ ಏ.17ರವರೆಗೆ ನಡೆಯಲಿದೆ.
ಮಾ.28ರಂದು ಶುಕ್ರವಾರ ಮಂಗಳಗುಡ್ಡ, ಪಟ್ಟಕಲ್ಲ, ಬಾಚಿನಗುಡ್ಡ, ಕರಡಿಗುಡ್ಡ, ಬೂದನಗಡ, ಸಬ್ಬಲಹುಣಸಿ, ಅಮೀನಗಡ, ಚಿಮ್ಮಲಗಿ, ಗೋನಾಳ, ಶೀರಬಡಗಿ, ಮಂಗಳೂರು ಈ ಎಲ್ಲ ಗ್ರಾಮಗಳ ಭಕ್ತರು ಸಿಡಿ ಕಂಬ ಕಡಿಯುವ ಕಾರ್ಯಕ್ರಮ ನಡೆಸಿಕೊಡುವರು.
ಮಾ.30ರಂದು ಸೋಮನಾಥ ದೇವರ ಜಾತ್ರೆ, ಏ.1ರಂದು ಮಂಟಪ ನಿರ್ಮಾಣ, ಏ.2 ಗರುಡ ಪಟ ಕಟ್ಟುವದು (ಅಂಕಿ ಹಾಕುವದು), ಏ.7ರಂದು ಮರಳಿನ ಕರ್ಣ ನಿರ್ಮಾಣ ಮಾಡಿ, ಶ್ರೀ ಸೋಮನಾಥ ಹಾಗೂ ಮಂಗಳಾದೇವಿ ಪಾದ ದರ್ಶನ, ಏ.8ರಂದು ಗೋನಾಳ, ಶೀರಬಡಗಿ, ಮಂಗಳೂರು ಭಕ್ತರಿಂದ ದೇವಿಗೆ ಉಡಿ ತುಂಬುವವರು. ಮಂಗಳಗುಡ್ಡ, ಪಟ್ಟಕಲ್ಲ, ಬಾಚಿನಗುಡ್ಡ, ಕರಡಿಗುಡ್ಡ, ಬೂದನಗಡ, ಸಬ್ಬಲಹುಣಸಿ, ಅಮೀನಗಡ, ಚಿಮ್ಮಲಗಿ, ಗ್ರಾಮಗಳ ಭಕ್ತರಿಂದ ಕಳಸ ಡೊಳ್ಳು ಸೇರಿದಂತೆ ಸಕಲ ವಾದ್ಯಗಳೊಂದಿಗೆ ಮಲಪ್ರಭಾ ನದಿಯಲಲಿ ಗಂಗಾಸ್ನಾನಗೈದು ದೇವಿಯು ಗದ್ದಿಗೊಳ್ಳುವಳು, ಸಂಜೆ 8ಗಂಟೆಗೆ ಹುಚ್ಚಯ್ಯ ಮಹೋತ್ಸವ ನಡೆಯಲಿದೆ.
ಏ.9ರಂದು ಪಟ್ಟದಕಲ್ಲಿನ ರಘುವೀರ ದೇಸಾಯಿ ಹಾಗೂ, ಪಟ್ಟದಕಲ್ಲ ಗೌಡ್ರು, ಚಿಮ್ಮಲಗಿ, ಕಾಟಾಪೂರದ ಗೌಡ್ರು ಬಂಧುಗಳು, ಭಕ್ತರಿಂದ ದೇವಿಗೆ ವಸಾಭರಣ, ಉಡಿ ತುಂಬುವ ಕಾರ್ಯಕ್ರಮ, ನಂದಿಕೇಶ್ವರ ಭಕ್ತರಿಂದ ದೇವಿಗೆ ಹೂವಿನ ಮಾಲೆ ರಥೋತ್ಸವದ ಸೇವೆ, ಕಳಸದ ಮೆರವಣಿಗೆ ನಡೆದು, ಸಂಜೆ 5:35ಕ್ಕೆ ರಥೋತ್ಸವ ನಡೆಯಲಿದೆ. ಏ.10ರಂದು ತಳ್ಳಿಕೇರಿ, ಚಿಮ್ಮಲಗಿ ಭಕ್ತರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 4ಗಂಟೆಗೆ ಪ್ರಸಿದಧ ಪೈಲಾನ್ವರಿಂದ ಕುಸ್ತಿ ನಡೆಯಲಿದೆ.
ಏ.11ರಂದು ತಳ್ಳಿಕೇರಿ ಭಕ್ತರಿಂದ ಉಡಿತುಂಬವುದು, ಏ.12ರಂದು ರಂಗ ವಿಸರ್ಜನೆ, ಏ.13ರಂದು ಕಳಸ ಇಳಿಸುವುದು. ಏ.15ರಂದು ಮಂಗಳಗುಡ್ಡ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಭಕ್ತರಿಂದ ದೇವಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ಏ.17ರಂದು ಬೆಳಗ್ಗೆ ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ಶ್ರೀದೇವಿಯು ಗ್ರಾಮ ಪ್ರವೇಶ ಮಾಡುವವಳು ಎಂದು ಮಂಗಳಾದೇವಿ ಜಾತ್ರಾಮಹೋತ್ಸವ ಸಮಿತಿ ತಿಳಿಸಿದೆ.