ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2018-19ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ನಗರದ ಲಕ್ಷ್ಮೀ ಜನಾರ್ದನ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿತ್ತು.
ತಾಪಂ ಸದಸ್ಯ ಕೆ.ಸಿ.ಪ್ರಶಾಂತ್‌ಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಪಂ ಉಪಾಧ್ಯಕ್ಷೆ ರೇಖಾ ಸುರೇಶ್, ಸದಸ್ಯ ಶಿವಬೋರಯ್ಯ, ಡಿಡಿಪಿಐ ವಿ.ಸೂರ್ಯಪ್ರಕಾಶಮೂರ್ತಿ, ಶಿಕ್ಷಣಾಧಿಕಾರಿ ಚಂದ್ರಶೇಖರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ರವಿಶಂಕರ್, ಶಿವರಾಮು, ಗೋಪಾಲ್‌ಗೌಡ, ಶಿವಣ್ಣಗೌಡ ಇದ್ದರು.
ನಂತರ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆದವು. ಕ್ಲಸ್ಟರ್ ಮಟ್ಟದಲ್ಲಿ ಪಾಲ್ಗೊಂಡು ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ್ದ ವಿದ್ಯಾರ್ಥಿಗಳು, ತಮ್ಮ ಕಲೆ, ಪ್ರತಿಭೆಗಳನ್ನು ಪ್ರದರ್ಶನ ಮಾಡಿ ಗಮನ ಸೆಳೆದರು.