ಅಂತಾರಾಷ್ಟ್ರೀಯ ಚಿತ್ರಕಲಾ ಶಿಬಿರಕ್ಕೆ ಮಾರ್ಕಾಲು ದೇವರಾಜು ಆಯ್ಕೆ

ಮಂಡ್ಯ: ಯೂರೋಪ್ ಖಂಡದ ಹಂಗೇರಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಿತ್ರಕಲಾ ಶಿಬಿರ ಮತ್ತು ಪ್ರದರ್ಶನದಲ್ಲಿ ಭಾರತ ದೇಶವನ್ನು ಇಬ್ಬರು ಕನ್ನಡಿಗರು ಪ್ರತಿನಿಧಿಸಲಿದ್ದಾರೆ.


ಜು.6ರಿಂದ 14ರವರೆಗೆ ನಡೆಯುವ ಮೊದಲನೇ ಅಂತಾರಾಷ್ಟ್ರೀಯ ಚಿತ್ರಕಲಾ ಶಿಬಿರದಲ್ಲಿ ವಿವಿಧ ರಾಷ್ಟ್ರಗಳ 60 ಕಲಾವಿದರು ಭಾಗವಹಿಸುತ್ತಿದ್ದು, ಭಾರತ ದೇಶವನ್ನು ಮಿಮ್ಸ್ ನೌಕರ ಮಾರ್ಕಾಲು ದೇವರಾಜು ಮತ್ತು ಗದಗ ಜಿಲ್ಲೆಯ ರಮೇಶ್ ತೇರದಾಳ್ ಪ್ರತಿನಿಧಿಸುತ್ತಿದ್ದಾರೆ.


9 ದಿನಗಳು ಮಸ್ ನಗರದಲ್ಲಿ ನಡೆಯುವ ಚಿತ್ರಕಲಾ ಪ್ರದರ್ಶನದಲ್ಲಿ ಜಗತ್ತಿನ ಖ್ಯಾತ ಕಲಾವಿದರು ಬಣ್ಣ ಹಾಗೂ ಕುಂಚದ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ.


ಜು.18ರಿಂದ 26ರವರೆಗೆ ದನ್ಯೂಬ್ ಗಂಗೇಸ್ ಎಂಬ ಶೀರ್ಷಿಕೆಯಡಿ ಭಾರತ ಹಾಗೂ ಯೂರೋಪಿಯನ್ ಕಲಾವಿದರ ಚಿತ್ರಕಲಾಕೃತಿಗಳ ಪ್ರದರ್ಶನವೂ ವರ್ ಮೆಜೋ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.

ಕಲಾ ಪ್ರದರ್ಶನಕ್ಕೆ ನಾಲ್ವರು ಆರ್ಟ್ ಕ್ಯೂರೆಟರ್‌ಗಳು ಇರುವುದು ವಿಶೇಷ. ಬುಡಾಪೇಸ್ಟ್ ನಗರದ ದನುಬ ನದಿ, ಭಾರತದ ಗಂಗಾನದಿ ಸಂಗಮವಾಗಿ ಚಿತ್ರಕಲಾ ಪ್ರದರ್ಶನದ ಶೀರ್ಷಿಕೆ ದನ್ಯೂಬ್ ಗಂಗೇಸ್ ಆಗಿರಲಿದೆ.
ಮಾರ್ಕಾಲು ದೇವರಾಜು ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಪ್ರಯಾಣದ ವೆಚ್ಚವನ್ನು ಚಿತ್ರಕಲಾವಿದರೇ ಭರಿಸಬೇಕಾಗಿದ್ದು, ಸುಮಾರು 3 ಲಕ್ಷ ರೂ. ವೆಚ್ಚವಾಗಲಿದೆ. ಆದ್ದರಿಂದ ಕಲಾಪ್ರೇಮಿಗಳು ಹಾಗೂ ದಾನಿಗಳು ನೆರವಾಗಬೇಕೆಂದು ಮಾರ್ಕಾಲು ಮನವಿ ಮಾಡಿದ್ದಾರೆ.
ಸಹಾಯ ಮಾಡುವವರು ಆರ್.ದೇವರಾಜು, ಎಸ್‌ಬಿಐ ಮಂಡ್ಯ ಮುಖ್ಯಶಾಖೆ, ಖಾತೆ ಸಂಖ್ಯೆ: 64005132334, ಐಎಫ್‌ಸಿ: ಎಸ್‌ಬಿಐಎನ್ 0040035 ಧನಸಹಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮೊ:990174435, 9148708832 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *