Tuesday, 20th November 2018  

Vijayavani

ಕಬ್ಬು ಬೆಳಗಾರರ ಜತೆ ಸಿಎಂ ಸಭೆ - ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರು - ಕಬ್ಬಿನ ಬಾಕಿ ಹಣ ಕೊಡಿಸ್ತಾರಾ ಎಚ್‌ಡಿಕೆ?        ಉ-ಕ ರೈತರ ಹೋರಾಟಕ್ಕೆ ಜಾತಿ ಲೇಪನ - ನಾಲಾಯಕ್ ಅನ್ನೋದು ಕೆಟ್ಟ ಪದ ಅಲ್ಲ - ಸಿಎಂ ವಿರುದ್ಧ ಮತ್ತೆ ಗುಡುಗಿದ ಯಡಿಯೂರಪ್ಪ        ಸಿಂಪಲ್ ಮ್ಯಾರೇಜ್ ಆಗೋರಿಗೆ ಶಾಕ್‌- ಮುಜರಾಯಿ ದೇವಸ್ಥಾನದಲ್ಲಿ ಮದುವೆಗೆ ಬ್ರೇಕ್‌ - ಅರ್ಚಕರ ಮನವಿಗೆ ಇಲಾಖೆ ನಿರ್ಧಾರ        ದಿಗ್ಗಜರಿಂದಲೇ ಬಿಬಿಎಂಪಿಗೆ ಬಾಕಿ - ಜಾರ್ಜ್‌, ಹ್ಯಾರೀಸ್‌, ಕುಪೇಂದ್ರರೆಡ್ಡಿ ಕಟ್ಟಿಲ್ಲ ಟ್ಯಾಕ್ಸ್‌ - ಪಾಲಿಕೆ ದಿವಾಳಿಗೆ ಕಾರಣರಾದ್ರಾ ನಾಯಕರು        ಛತ್ತಿಸ್‌ಗಡದಲ್ಲಿ ಎರಡನೇ ಹಂತದ ಮತದಾನ -72 ವಿಧಾನಸಭಾ ಕ್ಷೇತ್ರಗಳಲ್ಲಿ ವೋಟಿಂಗ್‌ - ಮಧ್ಯ ಪ್ರದೇಶದಲ್ಲಿ ಪ್ರಧಾನಿ ರ‍್ಯಾಲಿ        ಬೆಂಗಳೂರಿಗೆ ಬಂದಿಳಿದ ನವಜೋಡಿ - ಮುಂಬೈನಿಂದ ಸಿಲಿಕಾನ್‌ ಸಿಟಿಗೆ ರಣವೀರ್‌, ದೀಪಿಕಾ - ನಾಳೆ ಲೀಲಾ ಪ್ಯಾಲೇಸ್‌ನಲ್ಲಿ ರಿಸೆಪ್ಷನ್       
Breaking News

ಭಾರಿ ಮಳೆಗೆ ತತ್ತರಿಸಿದ ಮಂಡ್ಯ

Thursday, 18.10.2018, 6:57 AM       No Comments

ಮಂಡ್ಯ: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಂಡ್ಯ ತಾಲೂಕಿನ ಕಾರಸವಾಡಿ, ಹನಿಯಂಬಾಡಿ, ಚೀರನಹಳ್ಳಿ ಹಾನಿಗೊಳಗಾಗಿದ್ದು, ಹಬೀಬ್ ಕಾರ್ಖಾನೆ ಬಳಿಯ ಹೆಬ್ಬಾಳ 15 ವರ್ಷಗಳ ಬಳಿ ಉಕ್ಕಿ ಹರಿದು ಅಪಾರ ಅನಾಹುತ ಸೃಷ್ಟಿಸಿತು.
ಮಂಡ್ಯ-ಕೆ.ಎಂ.ದೊಡ್ಡಿ ರಸ್ತೆಯ ಹಬೀಬ್ ಕಾರ್ಖಾನೆ ಬಳಿ ಹೆಬ್ಬಾಳದ ಹಳೆಯ ಸೇತುವೆ ಮೇಲೆ ಹರಿಯುತ್ತಿರುವ ನೀರು, ಹೊಸ ಸೇತುವೆಯ ಮಗ್ಗುಲ್ಲಲ್ಲೇ ರಸ್ತೆಯನ್ನು ಕೊರೆಯಲಾರಂಭಿಸಿತ್ತು. ಹೆಬ್ಬಾಳದಿಂದ ಸುಮಾರು 4 ಅಡಿ (ಪುಟ್‌ಪಾತ್) 5ರಿಂದ ಆರು ಅಡಿ ಅಗಲ ರಸ್ತೆ ಕೊರೆದಿದ್ದು, ನೀರಿನ ರಭಸ ಹೆಚ್ಚಿದ್ದ ಕಾರಣ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.
ರಸ್ತೆ ಕುಸಿಯುವ ಆತಂಕದಿಂದ ಭಾರಿ ವಾಹನಗಳು ಎಚ್ಚರಿಕೆಯಿಂದ ಸಂಚರಿಸುತ್ತಿವೆ. ರಸ್ತೆ ಕುಸಿದಲ್ಲಿ ಮಂಡ್ಯ-ಕೆ.ಎಂ.ದೊಡ್ಡಿ ಸಂಚಾರಕ್ಕೆ ಸಂಚಕಾರ ಎದುರಾಗಲಿದ್ದು, ಭೂತನಹೊಸೂರು, ಕಬ್ಬನಹಳ್ಳಿ, ಸೂನಗಹಳ್ಳಿ, ಹೆಮ್ಮಿಗೆ, ಮಾದರಹಳ್ಳಿ, ಹರಳಹಳ್ಳಿ, ಹನುಮಂತನಗರ ಗ್ರಾಮಗಳ ಜನತೆ ಹತ್ತಾರು ಕಿ.ಮೀ. ಪರ್ಯಾಯ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಭಾರಿ ವಾಹನಗಳನ್ನು ನಿಷೇಧಿಸುವ ಸಾಧ್ಯತೆಗಳಿವೆ.
ಹೆಬ್ಬಾಳ ಉಕ್ಕಿ ಹರಿದ ಪರಿಣಾಮ ಮಂಗಳವಾರ ಕಟಾವು ಮಾಡಿ ಕಂತೆ ಕಟ್ಟಿ, ಬುಧವಾರ ಆಲೆಮನೆಗೆ ಸಾಗಣೆ ಮಾಡಲು ಜಮೀನಿನಲ್ಲಿ ಬಿಟ್ಟಿದ್ದ ಕಾರಸವಾಡಿ ಗ್ರಾಮದ ಕೃಪೇಶ್ ಎಂಬುವರ ಕಬ್ಬು ನೀರಿನಲ್ಲಿ ಕೊಚ್ಚಿ ಹೋಗಿದೆ.
ಮಂಡ್ಯ-ಹನಿಯಂಬಾಡಿ ರಸ್ತೆಯಲ್ಲಿ ಹೆಬ್ಬಾಳದ ಸೇತುವೆ ಮೇಲೆ ನೀರು ಹರಿಯುತ್ತಿದ್ದ ಪರಿಣಾಮ ಬೆಳಗ್ಗೆ 10 ಗಂಟೆ ತನಕ ಸಂಚಾರ ರದ್ದಾಗಿತ್ತು. ಹೆಬ್ಬಾಳದ ಅಕ್ಕಪಕ್ಕದ ಜಮೀನುಗಳು ಜಲಾವೃತವಾಗಿದ್ದು, 11 ಗಂಟೆ ನಂತರ ನೀರಿನ ಪ್ರಮಾಣ ಕೊಂಚ ಇಳಿಕೆಯಾಗಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕುಸಿದು ಬಿದ್ದ ಮನೆ:
ಭಾರಿ ಮಳೆಗೆ ಮದ್ದೂರು ತಾಲೂಕಿನ ಮಾದರಹಳ್ಳಿಯ ನಾಗಲಿಂಗೇಗೌಡ ಎಂಬುವರ ಮನೆ ಕುಸಿದು ಬಿದ್ದಿದೆ. ಆಲೆಮನೆಗೆ ಹೊಂದಿಕೊಂಡಂತೆ ಇದ್ದ ವಾಸದ ಮನೆ ಸಂಪೂರ್ಣ ಕುಸಿದುಬಿದ್ದು, ಅಪಾರ ನಷ್ಟವಾಗಿದೆ.
ಈ ಮನೆಯಲ್ಲಿ ಕುಟುಂಬ ಸದಸ್ಯರು ವಾಸ ಇರುತ್ತಿರಲಿಲ್ಲ. ಸ್ನಾನದ ಮನೆ, ಶೌಚಗೃಹ ಹಾಗೂ ರಾಸುಗಳನ್ನಷ್ಟೇ ಕಟ್ಟುತ್ತಿದ್ದರು. ಸದ್ಯ ರಾತ್ರಿ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನೂ ಮಳೆಯಿಂದ ಹಾಲಹಳ್ಳಿ ಸ್ಲಂ ಸೇರಿದಂತೆ ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನತೆ ರಾತ್ರಿ ಜಾಗರಣೆ ಮಾಡಬೇಕಾಯಿತು.

Leave a Reply

Your email address will not be published. Required fields are marked *

Back To Top