18.5 C
Bangalore
Monday, December 16, 2019

ಪಿಇಎಸ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

Latest News

‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ಇಲ್ಲಿನ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಭಾನುವಾರ ಬೆಳಗ್ಗೆ ‘ದಿಶಾ ರೈಡ್ ಆಂಡ್ ವಾಕ್’ ಘೋಷಣೆಯೊಂದಿಗೆ...

‘ಆಟೋ ರಿಕ್ಷಾ ರನ್’

ಹುಬ್ಬಳ್ಳಿ: ಕನ್ಯಾಕುಮಾರಿಯಿಂದ ಅಹಮದಾಬಾದ್​ವರೆಗೆ ‘ಆಟೋ ರಿಕ್ಷಾ ರನ್’ ಹಮ್ಮಿಕೊಂಡಿರುವ ಇಂಗ್ಲೆಂಡಿನ ‘ಸೇವಾ ಯುಕೆ’ ಸಂಸ್ಥೆಯ ಅನಿವಾಸಿ ಭಾರತೀಯರು ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಗೋವಾದ...

ಗೀತೆ ಅಧ್ಯಯನದಿಂದ ಜೀವನ ಸುಖಮಯ

ಧಾರವಾಡ: ಗೀತೆ ದೀಪ ಸ್ವರೂಪ. ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನವನ್ನು ನೀಡುವುದು. ಸತ್ಸಂಗ ಮತ್ತು ಜ್ಯೋತಿ ಎರಡೂ ನಮ್ಮ ಜೀವನದಲ್ಲಿ ಪ್ರಧಾನ ಪಾತ್ರ...

ಸ್ವಾಮಿಯೇ ಶರಣಂ ಅಯ್ಯಪ್ಪ

ಹುಬ್ಬಳ್ಳಿ: ನಗರದ ಶಿರೂರು ಪಾರ್ಕ್ ಅಯ್ಯಪ್ಪ ಸ್ವಾಮಿ ದೇಗುಲದ ಮಾಲಾಧಾರಿಗಳು ಹಾಗೂ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ವತಿಯಿಂದ ನಗರದಲ್ಲಿ ಭಾನುವಾರ ಅಯ್ಯಪ್ಪ...

ದೇಶದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ ಸಮಸ್ಯೆ

ಮೈಸೂರು: ಬಂಡವಾಳಶಾಯಿಗಳ ಪರ ಆಡಳಿತ ನಡೆಸುತ್ತಿರುವ ಸರ್ಕಾರಗಳು, ದುಡಿಯುವ ವರ್ಗವನ್ನು ಕಡೆಗಣಿಸಿವೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸಾಕಷ್ಟು ಕಾರ್ಖಾನೆಗಳು ಬಾಗಿಲು...

ಮಂಡ್ಯ: ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಇನ್ನೊವೇಟಿವ್ ಟೆಕ್ನಿಕಲ್ ಪ್ರಾಜೆಕ್ಟ್ ಎಗ್ಸಿಬಿಷನ್-2019’ನಲ್ಲಿ ಹಲವು ಮಾದರಿಗಳು ಗಮನಸೆಳೆದವು.

ಕಾಲೇಜಿನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ವಿಭಿನ್ನ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕಿಟ್ಟಿದ್ದರು. ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬರುವವರಿಗೆ ಪ್ರಾತ್ಯಕ್ಷಿಕೆ ಸಹಿತ ವಿವರಣೆ ನೀಡಿದರು.

ಗಮನ ಸೆಳೆದ ಮಾದರಿ: ಹನಿ ನೀರಾವರಿ ವ್ಯವಸ್ಥೆಯಲ್ಲಿ ಭೂಮಿಯಲ್ಲಿರುವ ತೇವಾಂಶವನ್ನು ಸೆನ್ಸಾರ್ ಮೂಲಕ ಗುರುತಿಸುವ ಸಾಧನವನ್ನು ಎನ್.ಭರತ್, ಧೀರಜ್ ಪೂವಯ್ಯ, ಯು.ಭರತ್, ಎನ್.ಹರ್ಷಿತಾ ಸಿದ್ಧಪಡಿಸಿದ್ದಾರೆ. ನೀರು ಪೋಲಾಗದಂತೆ ತಡೆಯುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರತಿ ಸಾಲಿಗೂ ಒಂದೊಂದು ಸೆನ್ಸಾರ್ ಇರುತ್ತದೆ. ಅದು ಭೂಮಿಯೊಳಗೆ ಎಷ್ಟು ತೇವಾಂಶವಿದೆ ಎನ್ನುವುದನ್ನು ಗುರುತಿಸುವುದು ಮಾತ್ರವಲ್ಲದೆ, ತೇವಾಂಶ ಕಡಿಮೆಯಾದ ಸಂದರ್ಭದಲ್ಲಿ ಮೊಬೈಲ್‌ಗೆ ಸಂದೇಶ ರವಾನಿಸುತ್ತದೆ. ದೂರದ ಪ್ರದೇಶದಿಂದಲೂ ಇದನ್ನು ನಿಯಂತ್ರಿಸಬಹುದು. ಜತೆಗೆ 6 ತಿಂಗಳಿಗೊಮ್ಮೆ ಭೂಮಿಯಲ್ಲಿರುವ ಗೊಬ್ಬರದ ಪ್ರಮಾಣವನ್ನೂ ಪರಿಶೀಲಿಸಬಹುದಾಗಿದೆ.

ವಿದ್ಯಾರ್ಥಿಗಳಾದ ವಿ.ಸ್ವರೂಪ, ಎನ್.ಎಂ.ವರುಣ, ದರ್ಶನ್ ಬಹುಪಯೋಗಿ ಕೃಷಿ ಯಂತ್ರ ಮಾದರಿ ಮಾಡಿದ್ದಾರೆ. ಒಂದೇ ಬಾರಿಗೆ ಉಳುಮೆ, ಬಿತ್ತನೆ, ಮಟ್ಟ ಮಾಡುತ್ತದೆ. ಯಂತ್ರದ ಕೆಳಭಾಗದಲ್ಲಿ ನೇಗಿಲು ಮಾದರಿ ಹಲಗೆ ಜೋಡಿಸಲಾಗಿದೆ. ಅದರ ಹಿಂದೆ ಭೂಮಿ ಮಟ್ಟ ಮಾಡುವ ಸಾಧನವಿದೆ. ಮೇಲ್ಭಾಗದಲ್ಲಿ ಬಿತ್ತನೆ ಬೀಜ ಹಾಕುವಂತೆ ವ್ಯವಸ್ಥೆ ಮಾಡಲಾಗಿದೆ. ಉಳುಮೆ ಮಾಡುವ ಸಮಯದಲ್ಲಿ ಅದರ ಹಿಂದೆಯೇ ಬಿತ್ತನೆಯಾಗುವ ರೀತಿಯಲ್ಲಿ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ, ಔಷಧ ಸಿಂಪರಣೆ ವ್ಯವಸ್ಥೆಯೂ ಇದೆ.

ಇನ್ನು ಮೊಹಮ್ಮದ್, ತೈಬಾ ಅಬ್ಸಾನ್, ಸುರಯ್ಯ ಸುಲ್ತಾನಾ, ಅಕ್ಷಯ್‌ಗೌಡ ಸಿದ್ಧಪಡಿಸಿರುವ ಮಾದರಿಯೂ ವಿಭಿನ್ನವಾಗಿದೆ. ಕನ್ನಡಿ ಮಾದರಿಯಲ್ಲಿರುವ ಗಾಜಿನಿಂದ ಮನೆ ನಿಯಂತ್ರಣ ಮಾಡಬಹುದು. ಅಲ್ಲದೆ, ಜನರ ಜತೆ ಮಾತನಾಡುತ್ತದೆ. ಮೊಬೈಲ್ ಕಳೆದುಹೋಗಿದ್ದರೆ ಆ ನಂಬರ್‌ಗೆ ಡಯಲ್ ಮಾಡಿ ಎಲ್ಲಿದೆ ಎನ್ನುವುದನ್ನು ಪತ್ತೆ ಮಾಡುತ್ತದೆ. ಜತೆಗೆ ಸೂಚನೆ ನೀಡಿದರೆ ಮನೆಯೊಳಗೆ ಬಲ್ಬ್ ಉರಿಯುವಂತೆ ಮತ್ತು ಸ್ಥಗಿತಗೊಳ್ಳುವಂತೆ ಮಾಡುತ್ತದೆ. ದಿನದ ವಿಶೇಷತೆಯ ಬಗ್ಗೆಯೂ ನಿಮಗೆ ಸಂದೇಶವನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ.

ಲೈನ್‌ಮನ್ ರಕ್ಷಣೆ: ಲೈನ್‌ಮನ್‌ಗಳ ರಕ್ಷಣೆಗಾಗಿ ಒಟಿಪಿ ಆಧರಿತ ಸುರಕ್ಷತಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳಾದ ಮೇಘನಾ, ಕೌಸಲ್ಯಾ, ಸಹನಾ, ತೇಜಸ್ವಿನಿ ಅಭಿವೃದ್ಧಿಪಡಿಸಿದ್ದಾರೆ. ಮೊಬೈಲ್‌ನಲ್ಲಿ ಒಟಿಪಿ ಪಾಸ್‌ವರ್ಡ್ ರೂಪಿಸಿ ಫೀಡರ್‌ಗಳಿಗೆ ಹರಿಸಲಾಗುವ ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಗುವುದು. ಲೈನ್‌ಮನ್ ತನ್ನ ಕೆಲಸ ಮುಗಿದ ನಂತರ ಅದೇ ಒಟಿಪಿ ಪಾಸ್‌ವರ್ಡ್ ಮೂಲಕವೇ ವಿದ್ಯುತ್ ಹರಿಸುವಂತೆ ರೂಪಿಸಲಾಗಿದೆ. ಆತನನ್ನು ಹೊರತುಪಡಿಸಿ ಮತ್ತ್ಯಾರೂ ವಿದ್ಯುತ್ ಪ್ರವಹಿಸುವಂತೆ ಮಾಡಲು ಅವಕಾಶವಿಲ್ಲ. ಈ ವ್ಯವಸ್ಥೆಯನ್ನು ಪ್ರತ್ಯೇಕ ವಿದ್ಯುತ್ ಲೈನ್‌ಗೂ ಅಳವಡಿಸಿಕೊಳ್ಳಲು ಅವಕಾಶವಿದೆ.

ರಸ್ತೆಗಳ ಮೇಲಿನ ಶಾಖವನ್ನು ತಂಪಾಗಿರಿಸುವಂತಹ ಬಣ್ಣದ ಮಾದರಿಯನ್ನು ಸಿ.ಬಿ.ದಿಲೀಪ್‌ಕುಮಾರ್, ಎಚ್.ಆರ್.ಶ್ರೇಯಸ್, ಕೆ.ಹರ್ಷಿತಾ, ಬಿ.ಬಿ.ಸಾರಾ, ಸಂಗಣ್ಣ ಅಭಿವೃದ್ಧಿಪಡಿಸಿದ್ದಾರೆ. ಸಾಮಾನ್ಯ ರಸ್ತೆಗಳ ಮೇಲಿನ ಶಾಖಕ್ಕೂ ಬಣ್ಣ ಹಾಕಿರುವ ಜಾಗದ ಮೇಲಿನ ತಾಪಮಾನಕ್ಕೂ 1 ರಿಂದ 2 ಡಿಗ್ರಿಯಷ್ಟು ವ್ಯತ್ಯಾಸ ಕಂಡುಬಂದಿರುವುದನ್ನು ನಿಖರವಾಗಿ ಗುರುತಿಸಬಹುದು. ಇದರಿಂದ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕಡಿಮೆ ಮಾಡಿದಂತಾಗುವುದು. ಫುಟ್‌ಪಾತ್‌ಗೆ ಹಾಕಲಾಗುವ ಮಾದರಿಗಳಿಗೆ ಈ ಬಣ್ಣ ಲೇಪನ ಮಾಡುವುದರಿಂದ ಆ ಭಾಗ ತಂಪಾಗಿರುತ್ತದೆ. ಜತೆಗೆ ಅದರ ಮೇಲ್ಮೈ ಮಾದರಿ ರಚನೆ ಸಂಧುಗಳಿರುವಂತೆ ರೂಪಿಸಲಾಗಿದ್ದು, ಮಳೆ ನೀರು ಭೂಮಿ ಸೇರುತ್ತದೆ. ಇದಷ್ಟೇ ಅಲ್ಲದೆ ಇನ್ನೂ ಹಲವು ಮಾದರಿಯನ್ನು ಅಭಿವೃದ್ಧಿಪಡಿಸಲಾಗಿತ್ತು.

ಚಾಲನೆ: ತಾಂತ್ರಿಕ ವಸ್ತು ಪ್ರದರ್ಶನಕ್ಕೆ ಪಿಇಟಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ ಚಾಲನೆ ನೀಡಿದರು. ಪ್ರಾಂಶುಪಾಲ ಡಾ. ಎಚ್.ವಿ.ರವೀಂದ್ರ, ಡೀನ್ ಡಾ.ಬಿ.ಎಸ್.ಶಿವಕುಮಾರ್, ಪಿಇಟಿ ಖಜಾಂಚಿ ಎಂ.ಬಿ. ಬೋರೇಗೌಡ ಇತರರಿದ್ದರು.

Stay connected

278,753FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...