ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಆಹ್ವಾನ ಬಂದರೆ ಹೋಗುತ್ತೇನೆ: ಸುಮಲತಾ ಅಂಬರೀಷ್​

ಬೆಂಗಳೂರು/ಮಂಡ್ಯ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಅಂದುಕೊಂಡಿದ್ದೆ. ಆದರೆ, ಇಷ್ಟೊಂದು ಬಹುಮತ ಗಳಿಸುತ್ತದೆ ಎಂದು ತಿಳಿದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನಕ್ಕೆ ಅಹ್ವಾನ ಬಂದರೆ ಖಂಡಿತ ಹೋಗುತ್ತೇನೆ ಎಂದು ಮಂಡ್ಯ ಜಿಲ್ಲೆಯ ನೂತನ ಸಂಸದೆ ಸುಮಲತಾ ಅಂಬರಿಷ್​ ಅವರು ತಿಳಿಸಿದರು.

ಮಂಡ್ಯ ಜನ ನಿರ್ಧಾರ ಮಾಡುತ್ತಾರೆ
ಅಂಬರೀಷ್ 6ನೇ ತಿಂಗಳ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನನಗೆ ಟಿಕೆಟ್ ಕೊಟ್ಟಿದ್ದರೆ, ಇವತ್ತು ಅವರಿಗೆ ಮತ್ತೊಂದು ಗೆಲುವು ಸಿಗುತ್ತಿತ್ತು. ನಾನು ಕಾಂಗ್ರೆಸ್​ನಲ್ಲಿ ಇರಬೇಕಾ, ಬಿಜೆಪಿಗೆ ಹೋಗಬೇಕಾ ಎಂಬುವುದನ್ನು ಮಂಡ್ಯ ಜನ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ನನ್ನ ಮೇಲಿನ ಟೀಕೆಯ ಪರಿಣಾಮವೇ ಈ ಫಲಿತಾಂಶ
ಈಗ‌ ಸರ್ಕಾರ ಪತನ ಆದರೆ ಅದಕ್ಕೆ ಮಂಡ್ಯ ರಿಸಲ್ಟ್ ಕಾರಣನಾ ಎಂಬ ಪ್ರಶ್ನೆಗೆ ಉತ್ತರಿಸಿ ಅವರು ಅದಕ್ಕೂ ನನಗೂ ಸಂಬಂಧ ಇಲ್ಲ. ಅದು ಮುಂಚಿನಿಂದಲೂ ನಡೆಯುತ್ತಿದೆ. ಅದರ ಬಗ್ಗೆ ನಾನು ಯೋಚನೆ ಮಾಡಿಲ್ಲ. ನನ್ನ ಬಗ್ಗೆ ಟೀಕೆ ಮಾಡಿದ್ದು ಇಡೀ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಪರಿಣಾಮ ಬೀರಿದೆ ಎಂದರು.

ಅಂಬಿ ಕನಸನ್ನು ನಾನು ನನಸು ಮಾಡುತ್ತೇನೆ
ನನ್ನ ಗೆಲುವಿನಲ್ಲಿ ಹೆಣ್ಣು ಮಕ್ಕಳ ಪಾಲೇ ಅಧಿಕವಾಗಿದೆ. ಶೇ. 50 ವೋಟ್ ಅವರಿಂದ ಆಗಿದೆ ಎಂಬುದರ ಮಾಹಿತಿ ಇದೆ. ಸಿಎಂ ಕುಮಾರಸ್ವಾಮಿ, ನಿಖಿಲ್ ಹಾಗೂ ದೇವೇಗೌಡರು ಯಾರು ಕೂಡ ಕರೆ ಮಾಡಿಲ್ಲ. ನಾನು ಸದ್ಯಕ್ಕಂತೂ ನಟನೆ ಮಾಡುವುದಿಲ್ಲ. ಜವಾಬ್ದಾರಿ ತುಂಬಾ ಇದೆ. ರಾಜಕಾರಣದಿಂದ ತುಂಬಾ ಕಲಿಯುವುದು ಇದೆ. ಸದ್ಯ ರಾಜಕಾರಣದಲ್ಲಿ ಏನು ಮಾಡಬಾರದು ಅನ್ನೋದನ್ನು ಕಲಿತಿದ್ದೀನಿ. ಮೋದಿ ಪ್ರಮಾಣ ವಚನಕ್ಕೆ ಆಹ್ವಾನ ಬಂದರೆ ಹೋಗುತ್ತೇನೆ. ಮಂಡ್ಯ ಜನತೆಗೆ ವಸತಿ ನಿಡಬೇಕೆಂಬುದು ಅಂಬಿ ಕನಸಾಗಿತ್ತು. ಅಂಬಿ ಕನಸನ್ನು ನಾನು ನನಸು ಮಾಡುತ್ತೇನೆ ಎಂದು ಹೇಳಿದರು.

ತುಂಬಾ ಸೌಜನ್ಯತೆಯನ್ನು ಮೆರೆದಿದ್ದಾರೆ
ಯಶ್ ಮೊದಲು ಕರೆ ಮಾಡಿ ಏನು ಎಂಪಿ ಮೇಡಮ್​ ಎಂದರು. ಹಾಗೇ ದರ್ಶನ್ ಕೂಡ ಕರೆ ಮಾಡಿ ಎಂಪಿ ಮದರ್ ಇಂಡಿಯಾ ಎಂದು ಶುಭ ಕೋರಿದರು. ಎಲ್ಲರೂ ತುಂಬಾ ಖುಷಿಯಲ್ಲಿದ್ದಾರೆ. ಯಶ್ ಹಾಗೂ ದರ್ಶನ್​​ ಪ್ರಚಾರದಲ್ಲಿ ತುಂಬಾ ಟೀಕೆಯನ್ನು ಎದುರಿಸಿದರು. ಈಗ ಅವರು ಕೌಂಟರ್ ಕೊಡಬಹುದಿತ್ತು. ಆದರೆ, ಅವರು ಅಂತವರಲ್ಲ. ನಾವ್ಯಾರು ಆ ರೀತಿ ಮಾಡಲ್ಲ. ಅವರು ತುಂಬಾ ಸೌಜನ್ಯತೆಯನ್ನು ಮೆರೆದಿದ್ದಾರೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

2 Replies to “ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಆಹ್ವಾನ ಬಂದರೆ ಹೋಗುತ್ತೇನೆ: ಸುಮಲತಾ ಅಂಬರೀಷ್​”

  1. You are onake obbava, you are Mandya ki rani laxmi devi and also kittur Rani Chennamma. All widows should learn lessons from Sumalatha akka to live honourably remembering husband goal and name. A heartful salute to you Madam

Leave a Reply

Your email address will not be published. Required fields are marked *