ನಿಖಿಲ್‌ ಬಂದಾನಾ, ಸುಮಲತಾ ಬಂದಾಳಾ ಎಂದು ಕೇಳಿದ್ದಕ್ಕೆ ದೇವರು ಬಂದಂತೆ ನುಡಿದ ಮಕ್ಕಳ ಭವಿಷ್ಯ ನಿಜವಾಗುತ್ತಾ?

ಮಂಡ್ಯ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಚುನಾವಣೆ ಮುಗಿದು ಇದೀಗ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿರುವ ಬೆನ್ನಲ್ಲೇ ಮಂಡ್ಯದಲ್ಲಿ ಗೆಲ್ಲುವ ಕುದುರೆ ನಿಖಿಲ್‌ ಅಥವಾ ಸುಮಲತಾ ಅಂಬರೀಷ್‌ ಅವರದ್ದಾ ಎಂಬ ಪ್ರಶ್ನೆಗೆ ಮಕ್ಕಳು ಭವಿಷ್ಯ ನುಡಿದಿದ್ದಾರೆ.

ಹೌದು, ಮೈ ಮೇಲೆ ದೇವರು ಬಂದಂತೆ ನಟಿಸುವ ಬಾಲಕನೋರ್ವನ ಬಳಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್‌ ಅವರು ಗೆಲ್ಲುತ್ತಾರಾ ಇಲ್ಲವೆ ನಿಖಿಲ್‌ ಕುಮಾರಸ್ವಾಮಿ ಗೆಲ್ಲುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾನೆ. ಇದಕ್ಕೆ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆಲ್ಲುತ್ತಾರೆಂದು ಮಕ್ಕಳು ಭವಿಷ್ಯ ನುಡಿದಿದ್ದಾರೆ.

ಹಳ್ಳಿಗಳ ಕಡೆ ಗುಡ್ಡಪ್ಪನ ಮೈಮೇಲೆ ದೇವರು ಬಂದು ಜನರಿಗೆ ಭವಿಷ್ಯ ನುಡಿಯುತ್ತಾರೆ. ಅದರಂತೆ ದೇವರು ಬಂದಾಗ ಗುಡ್ಡಪ್ಪನ ಬಳಿ ಜನರು ಪ್ರಶ್ನೆ ಕೇಳುವುದು ವಾಡಿಕೆ. ಹಾಗೆಯೇ ದೇವರು ಬಂದಿದೆ ಎಂದು ನಟಿಸುವ ಬಾಲಕನಿಗೆ ಮತ್ತೊಬ್ಬ ಬಾಲಕ ನಿಖಿಲ್ ಬಂದಾನೋ? ಸುಮಲತಾ ಬಂದಾಳೋ?ಎಂದು ಕೇಳುತ್ತಾನೆ. ಈ ವೇಳೆ ಸುಮಲತಾ ಎಂದು ಕಿರುಚಿ ದೇವರು ಬಂದಂತಿದ್ದ ಬಾಲಕ ಭವಿಷ್ಯ ನುಡಿದಿದ್ದಾನೆ.

ಆಟವಾಡುವ ವೇಳೆ ಮಕ್ಕಳು ದೇವರು ಬಂದಾಗೆ ನಟಿಸಿ ಸುಮಲತಾ ಗೆಲುವಿನ ಭವಿಷ್ಯ ನುಡಿದಿರುವ ವಿಡಿಯೋ ವೈರಲ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ದೇವರ ಸಮಾನ, ಮಕ್ಕಳು ಹೇಳಿದ ಭವಿಷ್ಯ ನಿಜವಾಗಲಿದೆಯಾ ಎಂಬ ಚರ್ಚೆಗಳು ಆರಂಭವಾಗಿವೆ. (ದಿಗ್ವಿಜಯ ನ್ಯೂಸ್)

2 Replies to “ನಿಖಿಲ್‌ ಬಂದಾನಾ, ಸುಮಲತಾ ಬಂದಾಳಾ ಎಂದು ಕೇಳಿದ್ದಕ್ಕೆ ದೇವರು ಬಂದಂತೆ ನುಡಿದ ಮಕ್ಕಳ ಭವಿಷ್ಯ ನಿಜವಾಗುತ್ತಾ?”

  1. ಈ ವಿಷಯದಲ್ಲಿ ಮಕ್ಕಳ ಭವಿಷ್ಯ, ದೇವರ ಸಹಾಯ ಇವೆಲ್ಲಾ ನಡೆಯುವುದಿಲ್ಲ, ನಿಜವಾಗುವುದಿಲ್ಲ. ಇಲ್ಲಿ ನಡೆಯುವುದು ಸಾರ್ವಜನಿಕರು ಮಾಡಿರುವ ಮತದಾನದಿಂದಾಗುವ ನಿರ್ಧಾರ, ಫಲಿತಾಂಶ ಅಷ್ಟೇ.

Comments are closed.