ನಾಲ್ವರು ಸುಮಲತಾರನ್ನು ಕಂಡು ತಬ್ಬಿಬ್ಬಾದ ಮತದಾರರು, ಸುಮಲತಾ ಅಂಬರೀಷ್‌ಗೆ ಬರಬೇಕಿದ್ದ ಮತಗಳು ಹಂಚಿ ಹೋದವಾ?

ಮಂಡ್ಯ: ಜೆಡಿಎಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಎದುರಾಳಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಸ್ಪರ್ಧಿಸಿದ್ದು, ಇತ್ತೀಚಿಗಿನ ಮಾಹಿತಿ ಪ್ರಕಾರ ಸುಮಲತಾ 47,243 ಮತಗಳನ್ನು ಪಡೆದಿದ್ದರೆ, ನಿಖಿಲ್‌ 47,093 ಮತಗಳನ್ನು ಪಡೆದಿದ್ದಾರೆ.

ಆದರೆ, ಮೊದಲ ಸುತ್ತಿನ ಮತ ಎಣಿಕೆಯ ಬಳಿಕ ನಿಖಿಲ್‌ ಮುನ್ನಡೆ ಕಾಯ್ದುಕೊಂಡಿದ್ದು, ಎರಡು ಮತಯಂತ್ರ ಮತ್ತು ನಾಲ್ವರು ಸುಮಲತಾರನ್ನು ನೋಡಿ ಮಂಡ್ಯ ಮತದಾರರು ಗೊಂದಲಕ್ಕೆ ಒಳಗಾಗಿದ್ದಾರಾ ಎನ್ನುವ ಚರ್ಚೆ ನಡೆಯುತ್ತಿದೆ.

ಒಂದೇ ಹೆಸರಿನ ನಾಲ್ವರು ಇರುವುದರಿಂದ ಮತದಾರರು ಸುಮಲತಾ ಅಂಬರೀಷ್ ಜತೆಗೆ ಉಳಿದ ಮೂವರು ಸುಮಲತಾರಿಗೂ ವೋಟು ನೀಡಿದ್ದಾರೆ ಎಂದು ಹೇಳಲಾಗಿದೆ. ಎರಡನೇ ಇವಿಎಂನಲ್ಲಿ ಬರುವ ಮೊದಲ ಅಭ್ಯರ್ಥಿಗೂ ಹೆಚ್ಚು ಮತ ನೀಡಿದ್ದಾರೆ.

ಒಟ್ಟು 22 ಜನ ಅಭ್ಯರ್ಥಿಗಳು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹೀಗಾಗಿ ಎರಡು ಇವಿಎಂ ಮಿಷನ್ ಇಡಲಾಗಿತ್ತು. ಮೊದಲ ಇವಿಎಂನಲ್ಲಿ ಮೊದಲ ಹೆಸರು ನಿಖಿಲ್ ಕುಮಾರಸ್ವಾಮಿಯದ್ದು, ಎರಡನೇ ಇವಿಎಂನಲ್ಲಿ ಮೊದಲ ಹೆಸರು ಶಶಿಕುಮಾರ್ ಎಂಬವರು 1354 ಮತ ಪಡೆದಿದ್ದಾರೆ. ಅದೇ ರೀತಿ ಮೂವರು ಸುಮಲತಾ ಸೇರಿ 1367 ಮತ ಪಡೆದಿದ್ದಾರೆ.

ಕ್ರ.ಸಂ 19, 21, ಮತ್ತು ಕ್ರ.ಸಂ. 22ರಲ್ಲಿರುವ ಸುಮಲತಾ ಎಂಬ ಹೆಸರಿನವರಿಗೆ ಸುಮಲತಾ ಅಂಬರೀಷ್‌ಗೆ ಬರಬೇಕಿದ್ದ ಕೆಲವು ಮತಗಳು ಹಂಚಿ ಹೋಗಿವೆ ಎಂದು ಹೇಳಲಾಗುತ್ತಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *