22.8 C
Bengaluru
Saturday, January 18, 2020

ಹಣೆಬರಹ ಬರೆಯಲು ಮತದಾರ ಸಜ್ಜು

Latest News

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

PHOTOS| ಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಪರ್ವ ಪ್ರಾರಂಭ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

ಉಡುಪಿ: ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಪರ್ವ ಶನಿವಾರ ಪ್ರಾತಃ 5.57ರ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣದ ಮೂಲಕ ಪ್ರಾರಂಭವಾಗಿದೆ.ಜೋಡುಕಟ್ಟೆಯಿಂದ...

ಮಂಡ್ಯ: ಕೆ.ಆರ್.ಪೇಟೆ ಉಪಚುನಾವಣೆ ಅಂತಿಮ ಹಂತಕ್ಕೆ ಬಂದಿದ್ದು, ಕಣದಲ್ಲಿರುವ 7 ಅಭ್ಯರ್ಥಿಗಳ ಹಣೆಬರಹ ಬರೆಯಲು ಮತದಾರ ಪ್ರಭುಗಳು ಸಜ್ಜಾಗಿದ್ದಾರೆ.

ಅಭಿವೃದ್ಧಿಗೆ ಸಹಕರಿಸಲಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅಭಿವೃದ್ಧಿಗಾಗಿ ಮತಕೊಡಿ ಎಂದು ಕೋರಿದ್ದಾರೆ.

ಜೆಡಿಎಸ್ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ಜಾತಿಯನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡಿದ್ದು, ಪಕ್ಷದ ಉಳಿವಿಗಾಗಿ ಬೆವರಿನ ಜತೆಗೆ ಕಣ್ಣೀರು ಸುರಿಸಿದ್ದರೆ, 2 ಬಾರಿಯ ಸೋಲಿನ ಅನುಕಂಪದ ಲಾಭ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಅಭ್ಯರ್ಥಿ ಕೂಡ ಕಣ್ಣೀರ ಕೋಡಿ ಹರಿಸಿದ್ದಾರೆ.

ಕ್ಷೇತ್ರದಲ್ಲಿ 1,05,678 ಪುರುಷ ಮತದಾರರು, 1,02,571 ಮಹಿಳಾ ಮತದಾರರು, ಇತರೆ ಐವರು ಸೇರಿ ಒಟ್ಟು 2,08,254 ಮತದಾರರಿದ್ದು, ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ.

ಮೂರೂ ಪಕ್ಷಗಳು ಅಬ್ಬರದ ಪ್ರಚಾರದ ಜತೆಗೆ ಹಣದ ಹೊಳೆಯನ್ನೇ ಹರಿಸಿದ್ದು, ಮಹಿಳೆಯರು, ಹಿಂದುಳಿದ ಹಾಗೂ ದಲಿತ ಮತಗಳನ್ನೇ ನೆಚ್ಚಿಕೊಂಡಿವೆ. ಮತದಾರ ಅಭಿವೃದ್ಧಿಗೆ ಮತ ನೀಡುವನೋ, ಅಭಿಮಾನದ ಹೊರೆ ಹೊರುವನು, ಅನುಕಂಪಕ್ಕೆ ‘ಕೈ’ ಹಿಡಿಯುವನೋ ಎಂಬುದು ನಿಗೂಢವಾಗಿದೆ.

ಕಣದಲ್ಲಿ 7 ಅಭ್ಯರ್ಥಿಗಳು: ಕ್ಷೇತ್ರದ ಉಪಚುನಾವಣೆ ಕಣದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಆದರೆ, ಪ್ರಮುಖ ಹೋರಾಟ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆಯೇ. ಜೆಡಿಎಸ್‌ನಿಂದ ಬಿ.ಎಲ್.ದೇವರಾಜು, ಕಾಂಗ್ರೆಸ್‌ನಿಂದ ಕೆ.ಬಿ.ಚಂದ್ರಶೇಖರ್, ಬಿಜೆಪಿಯಿಂದ ಕೆ.ಸಿ.ನಾರಾಯಣಗೌಡ ಅಭ್ಯರ್ಥಿಯಾಗಿದ್ದು, ಮೂವರೂ ಕ್ಷೇತ್ರದಲ್ಲಿ ಸಾಕಷ್ಟು ಬೆವರು ಸುರಿಸಿದ್ದಾರೆ.

ಇವರ ಜತೆಗೆ ಇನ್ನೂ ನಾಲ್ವರು ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಮೂವರು ಹೊರ ಜಿಲ್ಲೆಯವರು ಎಂಬುದು ಗಮನಾರ್ಹ. ಉತ್ತಮ ಪ್ರಜಾಕೀಯ ಪಾರ್ಟಿಯ ಎಚ್.ಎಂ.ಚಂದ್ರೇಗೌಡ ಚನ್ನರಾಯಪಟ್ಟಣ ತಾಲೂಕಿನ ಹೊನ್ನ ಶೆಟ್ಟಹಳ್ಳಿಯವರು, ಪೂರ್ವಾಂಚಲ್ ಮಹಾ ಪಾರ್ಟಿಯ ಎಚ್.ಡಿ.ರೇವಣ್ಣ ಚಿಕ್ಕಮಗಳೂರು ಜಿಲ್ಲೆಯ ಕೆಂಪನಹಳ್ಳಿ ಕಾಲನಿಯವರು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆೆ.ಎನ್.ಶಂಕರೇಗೌಡ ಸ್ಥಳೀಯರಾದರೆ, ಪಕ್ಷೇತರ ಅಭ್ಯರ್ಥಿಯಾಗಿರುವ ದೇವೇಗೌಡ ಮೈಸೂರು ಬುಗತಗಳ್ಳಿಯ ಕೆರೆಮನೆ ಫಾರ್ಮ್ ಹೌಸ್ ನಿವಾಸಿ. ಪಕ್ಷೇತರ ಅಭ್ಯರ್ಥಿಗಳು ನಗರದಲ್ಲಿ ಕೆಲವೆಡೆ ಪ್ರಚಾರ ನಡೆಸಿದ್ದು ಬಿಟ್ಟರೆ, ಗ್ರಾಮೀಣ ಪ್ರದೇಶದತ್ತ ಮುಖ ಮಾಡಿದಂತೆ ಕಾಣಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಈ ನಾಲ್ವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ವಾತಾವರಣವಿದೆ.

ನೈಟ್ ವಾಚನ್‌ಗಳ ಅಬ್ಬರ ?: ಮತದಾನದ ಹಿಂದಿನ ದಿನ ಅತ್ಯಂತ ಪ್ರಮುಖ ಎಂಬುದು ಈ ಹಿಂದಿನ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಸಾಬೀತಾಗಿದೆ. ಈ ಚುನಾವಣೆಯಲ್ಲಿಯೂ ಬುಧವಾರ ರಾತ್ರಿ ಅತ್ಯಂತ ಪ್ರಮುಖವಾಗಿತ್ತು. ಮೂರು ಪಕ್ಷಗಳ ಕಾರ್ಯಕರ್ತರು, ಮತದಾರರ ಮನೆಗಳತ್ತ ತೆರಳಿ ಬಾಗಿಲು ತಟ್ಟಿ ಬಟವಾಡೆ ಮಾಡುವ ಕಾರ್ಯ ಸಾಂಗವಾಗಿ ನಡೆಯಿತು.

ಕ್ಷೇತ್ರದೆಲ್ಲೆಡೆ ಬಿಗಿ ಭದ್ರತೆ: ಚುನಾವಣೆ ಪ್ರಕ್ರಿಯೆ ಆರಂಭವಾದ ದಿನದಿಂದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಅಲ್ಲಲ್ಲಿ ಗಲಾಟೆ, ಘರ್ಷಣೆಗಳಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಭದ್ರತೆ ವಹಿಸಲಾಗಿದೆ.
ಈಗಾಗಲೇ ಪಟ್ಟಣ ಹಾಗೂ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿರುವ ಕಡೆಗಳಲ್ಲಿ ಯೋಧರು, ಪೊಲೀಸರು ಪಥ ಸಂಚಲನ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಸುದ್ದಿಗಾರರಿಗೆ ತಿಳಿಸಿದರು.

ಕ್ಷೇತ್ರದಲ್ಲಿ 258 ಮತಗಟ್ಟೆಗಳನ್ನು ತೆರೆದಿದ್ದು, ಈ ಪೈಕಿ 52 ಸೂಕ್ಷ್ಮ, 16 ಪ್ರಭಾವಕ್ಕೆ ಒಳಗಾಗಬಹುದಾದ, 8 ಮಾದರಿ, 2 ಪಿಂಕ್ ಹಾಗೂ 1 ವಿಶೇಷ ಚೇತನರ ಮತಗಟ್ಟೆಯಾಗಿರಲಿವೆ. ಭದ್ರತೆಗಾಗಿ ಕೇಂದ್ರೀಯ ಮೀಸಲು ಪಡೆಯ 4 ಕಂಪನಿ , 4 ಕೆ.ಎಸ್.ಆರ್.ಪಿ ತುಕಡಿ, 9 ಡಿಎಆರ್, 450 ಹೋಂ ಗಾರ್ಡ್, 600ಸಿವಿಲ್ ಪೊಲೀಸ್, 3 ಡಿವೈಎಸ್, 6ಸಿಪಿಐ, 18 ಪಿಎಸ್‌ಐಗಳ ನೇಮಕ ಮಾಡಲಾಗಿದೆ. 71 ಮತಗಟ್ಟೆಗಳಿಗೆ ಕೇಂದ್ರೀಯ ಮೀಸಲು ಪಡೆ ನೇಮಕ ಮಾಡಲಾಗಿದೆ. ಜನತೆ ಯಾವುದೇ ಭೀತಿಯಿಲ್ಲದೆ, ನಿರ್ಭಯದಿಂದ ಮತದಾನ ಮಾಡಬೇಕು ಎಂದು ಕೋರಿದರು.

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...