VIDEO| ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಪ್ರವಾಹ ಭೀತಿ; ಡ್ರೋಣ್​ ಕಣ್ಣಲ್ಲಿ ಸೆರೆಯಾಯ್ತು ಕಾವೇರಿಯ ವಿಹಂಗಮ ನೋಟ!

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಸಂಜೆ ವೇಳೆಗೆ ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ದೂರವಾಗಲಿದೆ.

ಕೆಆರ್​ಎಸ್​ ಡ್ಯಾಂಗೆ ಬೆಳಗ್ಗೆ 2,04,200 ಕ್ಯೂಸೆಕ್ ನೀರಿನ ಒಳ ಹರಿವು ಇತ್ತು. ಇದೀಗ 1,48,366 ಕ್ಯೂಸೆಕ್​ಗೆ ಕುಸಿತಗೊಂಡಿದೆ. ಪ್ರಸ್ತುತ 1,63,924 ಕ್ಯೂಸೆಕ್ ಹೊರ ಹರಿವು ಇದೆ. ಒಳ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹೊರ ಹರಿವನ್ನು ಅಧಿಕಾರಿಗಳು ಇಳಿಸಲಿದ್ದಾರೆ. ಸಂಜೆ ವೇಳೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿದ್ದ ಪ್ರವಾಹ ಭೀತಿ ದೂರವಾಗಲಿದೆ.

ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಿನ ಮಟ್ಟ 122.00 ಅಡಿ ಇದೆ. ಡ್ಯಾಂನಲ್ಲಿ ಒಟ್ಟು 45.631 ಟಿಎಂಸಿ ನೀರು ಸಂಗ್ರಹವಾಗಿದೆ. ಹಾರಂಗಿ, ಹೇಮಾವತಿ ಜಲಾಶಯದ ಹೊರ ಹರಿವಿನಲ್ಲಿಯೂ ಭಾರೀ ಇಳಿಕೆಯಾಗಿದೆ. ಕ್ಷಣ ಕ್ಷಣಕ್ಕೂ ಒಳ ಹರಿವು ಇಳಿಮುಖವಾಗುತ್ತಿರುವುದರಿಂದ ಮತ್ತಷ್ಟು ಪ್ರವಾಹದ ಭೀತಿ ಕೊನೆಯಾಗಲಿದೆ.

ಕಾವೇರಿ ನದಿಯ ಜಲರಾಶಿ ಡ್ರೋಣ್ ಕಣ್ಣಲ್ಲಿ ಸೆರೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿ, ಬಲಮುರಿ ಬಳಿಯ ಕಾವೇರಿ ನದಿಯ ರೋಮಾಂಚಕ ದೃಶ್ಯ ಡ್ರೋಣ್ ಕಣ್ಣಲ್ಲಿ ಸೆರೆಯಾಗಿದೆ. ಎಡಮುರಿ ನಡುಗಡ್ಡೆ ಬಳಿ ಎರಡು ಭಾಗವಾಗಿ ಮತ್ತೆ ಒಂದುಗೂಡುವ ಕಾವೇರಿ ನದಿಯ ವಿಹಂಗಮ ನೋಟ ಮನಮೋಹಕವಾಗಿದೆ. (ದಿಗ್ವಿಜಯ ನ್ಯೂಸ್​)

ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಪ್ರವಾಹ ಭೀತಿ; ಡ್ರೋಣ್​ ಕಣ್ಣಲ್ಲಿ ಸೆರೆಯಾಯ್ತು ಕಾವೇರಿಯ ವಿಹಂಗಮ ನೋಟ!

ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಪ್ರವಾಹ ಭೀತಿ; ಡ್ರೋಣ್​ ಕಣ್ಣಲ್ಲಿ ಸೆರೆಯಾಯ್ತು ಕಾವೇರಿಯ ವಿಹಂಗಮ ನೋಟ!#Mandya #Kaveri #KarnatakaFloods #HeavyRain #KRSDam

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಆಗಸ್ಟ್ 12, 2019

Leave a Reply

Your email address will not be published. Required fields are marked *