ಮಂಡ್ಯದ 7 ಶಾಸಕರು ಸಿಎಂ ಕುಮಾರಸ್ವಾಮಿ ಬಾಡಿಗಾರ್ಡ್​ಗಳು

ಮಂಡ್ಯ: ಜೆಡಿಎಸ್‌ ಶಾಸಕರನ್ನು ಬಿಜೆಪಿ ಖರೀದಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಾಡಿಗಾರ್ಡ್ ರೀತಿ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದ್ದಾರೆ.

ಮಂಡ್ಯದ ಏಳೂ ಶಾಸಕರು ಕುಮಾರಸ್ವಾಮಿ ಅವರ ಬಾಡಿಗಾರ್ಡ್‌ಗಳು. ಜಿಲ್ಲೆಯ ಏಳಕ್ಕೆ ಏಳೂ ಶಾಸಕರು ಮುಖ್ಯಮಂತ್ರಿಗಳಿಗೆ ಬಾಡಿಗಾರ್ಡ್‌ನಂತೆ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ ಎಂದ ಅವರು, ಬಿಜೆಪಿಯಿಂದ ಬಂದ ಆಫರ್‌ ಬಗ್ಗೆ ಪ್ರತಿಕ್ರಿಯಿಸಿ, ಅವರಪ್ಪನಂತಹ ಆಫರ್ ಕೊಡುವುದಕ್ಕೆ ನಾವು ರೆಡಿ ಇದ್ದೀವಿ. ಅವರು ಚಿಲ್ಲರೆ ಆಟ ಮುಂದುವರೆಸಿದರೆ ನಮ್ಮ ಆಟ ತೋರಿಸುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿಯ ಯೋಗೇಶ್ವರ್‌ರಿಂದ ಜೆಡಿಎಸ್‌ ಶಾಸಕರಿಗೆ ಗಾಳ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಅವನ ಯೋಗ್ಯತೆಗೆ ಲೀಡರ್ ಗಿರಿ ಮಾಡಲಿ. ಆ ಮೇಲೆ ನಮ್ಮ ಶಾಸಕರನ್ನು ಖರೀದಿ ಮಾಡಲಿ. ಇಂತಹ ಆಟಗಳು ನಡೆಯುವುದಿಲ್ಲ. ಈ ಸರ್ಕಾರ ಸುಭದ್ರವಾಗಿದೆ. ಯಾವೊಬ್ಬ ಶಾಸಕರೂ ಆಮಿಷಕ್ಕೆ ಬಲಿಯಾಗಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)