ಮಂಡ್ಯದಲ್ಲಿ 9 ಗಂಟೆ ವೇಳೆಗೆ ಶೇ.4.87 ಮತದಾನ

ಮಂಡ್ಯ: 9 ಗಂಟೆ ವೇಳೆಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ.4.87 ರಷ್ಟು ಮತದಾನವಾಗಿದೆ.

ಪುರುಷರು ಉತ್ಸಾಹದಿಂದ ಮತದಾನದಲ್ಲಿ ತೊಡಗಿದ್ದು, ಮಹಿಳಾ ಮತದಾರರು ಮತಗಟ್ಟೆಗಳ ಬಳಿಗೆ ಬರುವುದು ಕಡಿಮೆಯಾಗಿತ್ತು.

ಮಳವಳ್ಳಿಯಲ್ಲಿ ಶೇ. 5.08, ಮದ್ದೂರು ಶೇ.4.19, ಮೇಲುಕೋಟೆ ಶೇ.7.00, ಮಂಡ್ಯ ಶೇ.6.34, ಶ್ರೀರಂಗಪಟ್ಟಣ ಶೇ.3.99, ನಾಗಮಂಗಲ ಶೇ.2.10, ಕೆ.ಆರ್.ಪೇಟೆ ಶೇ.5.15, ಕೆ.ಆರ್.ನಗರ ಶೇ.5.11. ಒಟ್ಟು ಶೇ. 4.87ರಷ್ಟು ಮತದಾನವಾಗಿದೆ.

ಕೆಲವೆಡೆ ಮತಯಂತ್ರಗಳು ಕೈಕೊಟ್ಟಿದ್ದರಿಂದ ಅರ್ಧದಿಂದ 1 ಗಂಟೆ ತಡವಾಗಿ ಮತದಾನ ಆರಂಭವಾಯಿತು.

Leave a Reply

Your email address will not be published. Required fields are marked *