ಬಿಜೆಪಿ ಬೆಂಬಲ ಹಿನ್ನೆಲೆ ಬಿಎಸ್​ವೈ ಭೇಟಿ ಮಾಡಿದ ಸುಮಲತಾ ಅಂಬರೀಷ್​​ ಬಳಿಕ ಹೇಳಿದ್ದೇನು?

ಬೆಂಗಳೂರು: ಮಂಡ್ಯ ಚುನಾವಣಾ ಅಖಾಡಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ತಮಗೆ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಷ್​ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರ ಮನೆಗೆ ಸೋಮವಾರ ಬೆಳಗ್ಗೆ ಭೇಟಿ ನೀಡಿ ಧನ್ಯವಾದ ಸಲ್ಲಿಸಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮಗೆ ಬೆಂಬಲ ನೀಡಿರುವುದಕ್ಕಾಗಿ ಅವರಿಗೆ ಕೃತಜ್ಞತೆ ಹೇಳಲು ಬಂದಿದ್ದೇನೆ. ಜತೆಗೆ ಬಿಎಸ್​ವೈ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.

ದರ್ಶನ್ ಮತ್ತು ಯಶ್ ಬಗ್ಗೆ ಸಿಎಂ ಕುಮಾರಸ್ವಾಮಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಿಎಂ ಏನು ಬೇಕಾದರು ಮಾತಾಡಲಿ, ನಾನು ಅದರ ಬಗ್ಗೆ ಏನನ್ನು ಹೇಳುವುದಿಲ್ಲ. ದರ್ಶನ ಕೂಡ ಇದನ್ನೇ ಹೇಳಿದ್ದಾರೆ. ಯಾರು ಏನು ಬೇಕಾದರು ಮಾತಾನಾಡಲಿ, ನಾವು ಜನರ ಜತೆಯಲ್ಲೇ ಇರುತ್ತೇವೆ. ಗೆದ್ದ ಬಳಿಕ ಮುಂದೇನು ಎಂಬುದನ್ನು ಕೂಡ ಜನರನ್ನೇ ಕೇಳುತ್ತೇವೆ ಎಂದರು.

ಬೆಂಬಲ ನೀಡಿದ್ದಕ್ಕೆ ಕೆಲ ಕಾಂಗ್ರೆಸ್​ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ವಿಚಾರವಾಗಿ ಮಾತನಾಡಿ ಹೀಗೆ ಆಗುತ್ತದೆ ಎಂದು ನಾವು ಮೊದಲೆ ಊಹಿಸಿದ್ದೆವು. ಹೀಗಾಗಿ ಅದರ ಬಗ್ಗೆ ಯಾರಿಗೂ ಬೇಸರ ಇಲ್ಲ. ಚುನಾವಣೆ ಬಳಿಕ ಮುಂದಿನದರ ಬಗ್ಗೆ ಯೋಚನೆ ಮಾಡಲಿದ್ದೇವೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

One Reply to “ಬಿಜೆಪಿ ಬೆಂಬಲ ಹಿನ್ನೆಲೆ ಬಿಎಸ್​ವೈ ಭೇಟಿ ಮಾಡಿದ ಸುಮಲತಾ ಅಂಬರೀಷ್​​ ಬಳಿಕ ಹೇಳಿದ್ದೇನು?”

  1. ಕಾದು ನೋಡೋಣ ಮಂಡ್ಯದ ಜನತೆಯ ಅಂತಿಮ ತೀರ್ಪನ್ನು ಈ ಬಾರಿ – ಗುಂಜಮಂಜ (Gunjmanja)

Comments are closed.