ನೊಂದ ಕುಟುಂಬಕ್ಕೆ ಚಲುವರಾಯಸ್ವಾಮಿ ಸಾಂತ್ವನ

ಮಂಡ್ಯ: ಇತ್ತೀಚೆಗೆ ನಿಧನರಾದ ದಿನಪತ್ರಿಕೆ ಛಾಯಾಗ್ರಾಹಕ ರಾಘವೇಂದ್ರ ಅವರ ನಿವಾಸಕ್ಕೆ ಭಾನುವಾರ ಮಾಜಿ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ವೇಳೆ ಕುಟುಂಬಸ್ಥರು ಆರ್ಥಿಕ ಸಮಸ್ಯೆ ಬಗ್ಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಿಆರ್‌ಎಸ್, ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಬಳಿಕ ಮತ್ತೊಬ್ಬ ದಿನಪತ್ರಿಕೆ ಛಾಯಾಗ್ರಾಹಕ ವೇಣುಗೋಪಾಲ್ ಅವರ ಮನೆಗೆ ತೆರಳಿದರು.ಕೆಲ ದಿನದ ಹಿಂದೆ ಸುದ್ದಿಗಾಗಿ ಫೋಟೋ ತೆಗೆಯುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಕಾಲಿಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೆ, ಆರ್ಥಿಕ ಸಹಾಯ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ನಗರಸಭೆ ಮಾಜಿ ಸದಸ್ಯ ಸೋಮಶೇಖರ್ ಕೆರಗೋಡು ಇತರರಿದ್ದರು.

 

Leave a Reply

Your email address will not be published. Required fields are marked *