ಹುಲ್ಲಿನ ಮೆದೆ ಬೆಂಕಿಗಾಹುತಿ

ಮಂಡ್ಯ: ಆಕಸ್ಮಿಕ ಬೆಂಕಿ ಬಿದ್ದು ಹುಲ್ಲಿನ ಮೆದೆ ಭಸ್ಮವಾಗಿದೆ.
ನಗರದ ಗುತ್ತಲಿನ ಎತ್ತಿನಗಾಡಿ ನಟರಾಜ್ ಎಂಬುವರು 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಹುಲ್ಲನ್ನು ತಮ್ಮ ತೆಂಗಿನ ತೋಟದಲ್ಲಿ ಮೆದೆ ಹಾಕಿದ್ದರು. ಬೆಳಗ್ಗೆ 10.40ರಲ್ಲಿ ಮೆದೆಗೆ ಬೆಂಕಿ ತಾಗು ಹುರಿಯಲಾರಂಭಿಸಿದೆ. ಸ್ಥಳೀಯರಿಂದ ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಿಂದ 80,000 ರೂ. ನಷ್ಟವಾಗಿದೆ. ತಮಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತ ನಟರಾಜು ಮನವಿ ಮಾಡಿಸಿದ್ದಾರೆ.
ಹುಲ್ಲಿನ ಮೆದೆ ಅಕ್ಕಪಕ್ಕದಲ್ಲಿ ಎಲ್ಲಿಯೂ ವಿದ್ಯುತ್ ತಂತಿ ಹಾದುಹೋಗಿಲ್ಲ. ಹಾಗಾಗಿ ಯಾರೋ ಬಿಡಿ, ಸಿಗರೇಟು ಸೇದಿ ಎಸೆದಿದ್ದು, ಅದರ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ.