ಮಂಡ್ಯ: ತಬ್ಲಿಘಿ ಪ್ರಕರಣ ಆಯ್ತು, ಶವ ತಂದು ಅಂತ್ಯಸಂಸ್ಕಾರ ಮಾಡಿದ ಪ್ರಕರಣವಾಯ್ತು, ಇದೀಗ ಮಂಡ್ಯಕ್ಕೆ ಕರೊನಾ ಹಾಟ್ಸ್ಟಾಟ್ ಮುಂಬೈನ ಧಾರಾವಿ ಸ್ಲಂ ಗುಮ್ಮ ವಕ್ಕರಿಸಿಕೊಂಡಿದೆ.
ಮುಂಬೈನಲ್ಲಿರುವ ಏಷ್ಯಾದ ಅತಿದೊಡ್ಡ ಸ್ಲಂ ಧಾರಾವಿಯಲ್ಲಿ ಕರೊನಾ ಪ್ರಕರಣ ಹೆಚ್ಚು ಪತ್ತೆಯಾಗಿವೆ. ಹೀಗಾಗಿ ಧಾರಾವಿಯಿಂದ ಮಂಡ್ಯಕ್ಕೆ ವಾಪಸ್ಸಾಗಿರುವ ಸಾವಿರಕ್ಕೂ ಹೆಚ್ಚು ಜನರಿಂದ ಕರೊನಾ ಆತಂಕ ಶುರುವಾಗಿದೆ. ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲ್ಲೂಕಿನಿಂದ ಸಾವಿರಾರು ಜನರು ಮುಂಬೈಗೆ ವಲಸೆ ಹೋಗಿದ್ದರು. ಇದೀಗ ಅವರೆಲ್ಲ ತರಕಾರಿ, ಹಣ್ಣಿನ ವಾಹನ ಹಾಗೂ ಸ್ವಂತ ವಾಹನಗಳಲ್ಲಿ ತವರಿಗೆ ಪ್ರವೇಶ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕರೊನಾ ವಾರಿಯರ್ಸ್ ಜೀವಕ್ಕೆ ಮುಳುವಾಯ್ತು ಜೀವ ಉಳಿಸುವ ಆಂಬುಲೆನ್ಸ್!
ಧಾರಾವಿಯಿಂದ ಊರಿಗೆ ಬಂದವರಿಂದಾಗಿ ಕರೊನಾ ಭಯ ಆವರಿಸಿದೆ. ಇದು ಮಂಡ್ಯ ಜಿಲ್ಲಾಡಳಿತದ ಆತಂಕಕ್ಕೂ ಕಾರಣವಾಗಿದೆ. ಧಾರಾವಿ ಸ್ಲಂನಿಂದ ಬಂದವರನ್ನು ಗುರುತಿಸುವ ಕಾರ್ಯಕ್ಕೆ ಇದೀಗ ಜಿಲ್ಲಾಡಳಿತ ಮುಂದಾಗಿದೆ.
ಆಘಾತಕಾರಿಯೆಂದರೆ ಧಾರಾವಿ ಸ್ಲಂನಿಂದ ಬಂದಿದ್ದ ಐವರಿಗೆ ಸೋಂಕು ದೃಢವಾಗಿದೆ. ಶವ ತಂದು ಅಂತ್ಯಸಂಸ್ಕಾರ ಮಾಡಿದ್ದ ಮೂವರು ಹಾಗೂ ಶವದ ಆಂಬುಲೆನ್ಸ್ ಹಿಂಬಾಲಿಸಿ ಕಾರಿನಲ್ಲಿ ಊರು ಸೇರಿದ್ದ ಇಬ್ಬರಿಗೆ ಸೋಂಕು ತಗುಲಿದೆ. ಹೀಗಾಗಿ ಮಂಡ್ಯದ ಗ್ರಾಮೀಣ ಭಾಗದಲ್ಲೀಗ ಧಾರಾವಿ ಸ್ಲಂ ಗುಮ್ಮ ಆವರಿಸಿಕೊಂಡಿದೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಡಿಸಿ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ; ಇವರಿಗೊಂದು ಸಮಸ್ಯೆ ಇತ್ತು ಎಂದ್ರು ಕಮಿಷನರ್
ಪತ್ನಿ ಪ್ರತಿಮಾರನ್ನು ಪ್ರೀತಿಯ ಬಲೆಗೆ ಬೀಳಿಸಿದ್ದು ಹೇಗೆಂದು ಇಶಾಂತ್ ಹೇಳ್ತಾರೆ ಕೇಳಿ…!