ಮಂಡ್ಯ: ಕರೊನಾದಿಂದ ಬಾಧಿಸುತ್ತಿರುವ ಸಕ್ಕರೆ ನಾಡಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮಂಡ್ಯ ಜಿಲ್ಲಾಡಳಿತ ನಿರ್ಧರಿಸಿದೆ. ಒಂದು ವೇಳೆ ನಿಯಮಗಳನ್ನು ಪಾಲಿಸದಿದ್ದರೆ, ಭಾರಿ ದಂಡವನ್ನು ಕಟ್ಟಬೇಕಾಗುತ್ತದೆ.
ಕರೊನಾ ಹರಡುವಿಕೆ ನಿಯಂತ್ರಿಸಲು ಮಂಡ್ಯ ಜಿಲ್ಲಾಡಳಿತ ದಂಡ ಮಾರ್ಗ ಅನುಸರಿಸಿದೆ. ಎಲ್ಲಂದರಲ್ಲಿ ಉಗುಳುವುದು ಹಾಗೂ ಮಾಸ್ಕ್ ಹಾಕದೆ ಓಡಾಡಿದರೆ ದಂಡ ಕಟ್ಟಬೇಕಾಗುತ್ತದೆ. ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಭಾಗಕ್ಕೂ ದಂಡ ಅನ್ವಯವಾಗಲಿದೆ.
ಇದನ್ನೂ ಓದಿ: ಐಫೋನ್ ಗಿಫ್ಟ್ ಆಮಿಷ: ಆನ್ಲೈನ್ ಲಿಂಕ್ ಕಳುಹಿಸಿ ಇಬ್ಬರ ಬ್ಯಾಂಕ್ ಖಾತೆಗೆ ಕನ್ನ
ವಿಶೇಷವೆಂದರೆ ಮದ್ಯಪಾನ ಹಾಗೂ ತಂಬಾಕು ಸೇವಿಸಿದರೂ ದಂಡ ಬೀಳಲಿದೆ. ಬೈಕ್ನಲ್ಲಿ ಇಬ್ಬರು, ಕಾರಿನಲ್ಲಿ ಮೂರಕ್ಕಿಂತ ಹೆಚ್ಚು ಜನ ಓಡಾಡಿದರೂ ಫೈನ್ ಕಟ್ಟಲೇಬೇಕು. ಅದಕ್ಕಾಗಿ ನಗರ ಪ್ರದೇಶದಲ್ಲಿ 200 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡ ನಿಗದಿ ಮಾಡಲಾಗಿದೆ.
ಇನ್ನು ಶವ ಸಂಸ್ಕಾರ, ಮದುವೆಗಳಲ್ಲೂ ನಿಗದಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಶವ ಸಂಸ್ಕಾರದಲ್ಲಿ 20 ಮಂದಿಗಿಂತ ಹೆಚ್ಚು ಜನ ಸೇರಿದರೆ ತಲಾ 200 ಫೈನ್ ಹಾಗೂ ಸಭೆ ನಡೆಸಿದರೆ 5 ಸಾವಿರ ರೂ. ದಂಡ ತೆರಬೇಕಾಗುತ್ತದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಸಾ.ರಾ. ಗೋವಿಂದುಗೆ ನಿಂದಿಸಿದ ಆರೋಪ: ನಟ ಜೈಜಗದೀಶ್ ನೀಡಿದ ಸ್ಪಷ್ಟನೆ ಏನು?
ಅಜಾನ್ ವಿಚಾರಕ್ಕೆ ಗಲಾಟೆ: ಆನಂದನಗರದಲ್ಲಿ ಬಿಗು ವಾತಾವರಣ, ಬಿಗಿ ಬಂದೋಬಸ್ತ್