ಮಂಡ್ಯ: ಸಂಕ್ರಾತಿ ಹಬ್ಬದ ವೇಳೆ ರಾಸುಗಳಿಗೆ ಕಿಚ್ಚು ಹಾಯಿಸುವಾಗ ವ್ಯಕ್ತಿಗೆ ಬೆಂಕಿ ಹರಡಿ ಸುಟ್ಟ ಗಾಯಗಳಾಗಿವೆ.
ಚಿಕ್ಕಬಳ್ಳಿ ಗ್ರಾಮದ ರವಿ ಎಂಬುವವರ ದೇಹಕ್ಕೆ ಬೆಂಕಿ ಹರಡಿ ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ರವಿ ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಕಿಚ್ಚು ಹಾಯಿಸಲು ತೆರಳಿದ್ದರು. ಗ್ರಾಮದ ಪ್ರಮುಖ ಸ್ಥಳದಲ್ಲಿ ರಾಶಿ ಹಾಕಿದ್ದ ಕಬ್ಬಿನ ಸೋಗೆಗೆ ಪೂಜೆ ನೆರವೇರಿಸಿದ ನಂತರ ಬೆಂಕಿ ಹಚ್ಚಿ ರಾಸುಗಳನ್ನು ಕಿಚಾಯಿಸಲು ಅನುಮತಿ ನೀಡಲಾಯಿತು. ಪಂಚೆ ತೊಟ್ಟಿದ್ದ ರವಿ ಕಿಚ್ಚು ಹಾಯಲು ಮುಂದಾದರು. ಈ ವೇಳೆ ಅವರ ಪಂಚೆಗೆ ಬೆಂಕಿ ಹರಡಿ ದೇಹಕ್ಕೆ ಆವರಿಸಿತು. ಕೂಡಲೇ ಗ್ರಾಮಸ್ಥರು ಬೆಂಕಿ ನಂದಿಸಿದರು. (ದಿಗ್ವಿಜಯ ನ್ಯೂಸ್)