ಅಯೋಗ್ಯ ಚಿತ್ರ ತಂಡ ಭೇಟಿ

ಮಂಡ್ಯ: ನಗರದ ಸಂಜಯ ಚಿತ್ರಮಂದಿರಕ್ಕೆ ಭಾನುವಾರ ‘ಅಯೋಗ್ಯ’ ಚಿತ್ರ ತಂಡ ಭೇಟಿ ನೀಡಿತು.

ನಾಯಕ ನಟ ನೀನಾಸಂ ಸತೀಶ್ ಮಾತನಾಡಿ, ಕೊಡಗು ಸಂತ್ರಸ್ತರ ನೆರವಿಗೆ ಚಿತ್ರತಂಡ ನೆರವಾಗಲಿದೆ. ಒಳ್ಳೆಯ ರೀತಿ ಸ್ಪಂದಿಸಲಿದೆ. ಕನ್ನಡ ಚಿತ್ರರಂಗದ ಕಲಾವಿದರು ಅವರ ನೆರವಿಗೆ ನಿಂತಿದ್ದಾರೆ. ಇಡೀ ಚಿತ್ರರಂಗ ಕೊಡಗು ಜಿಲ್ಲೆಯ ಜನತೆಗೆ ಸ್ಪಂದಿಸುತ್ತಿದ್ದಾರೆ ಎಂದರು.
ಅಯೋಗ್ಯ ಉತ್ತಮ ಸದಭಿರುಚಿಯ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ಜಿಲ್ಲೆಯ ಜನತೆ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ಹರಸುವಂತೆ ಮನವಿ ಮಾಡಿದರು.

ನಾಯಕಿ ರಚಿತಾ ರಾಮ್ ಮಾತನಾಡಿ, ಚಿತ್ರ ಬಿಡುಗಡೆ ವೇಳೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಳ್ಳೆಯ ಚಿತ್ರವನ್ನು ಜನತೆ ವೀಕ್ಷಿಸಿ ಬೆಂಬಲ ವ್ಯಕ್ತಪಡಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಚಿತ್ರದ ನಿರ್ಮಾಪಕ ಚಂದ್ರಶೇಖರ್, ನಿರ್ದೇಶಕ ಎಸ್.ಮಹೇಶ್‌ಕುಮಾರ್, ಹಾಸ್ಯನಟ ಕೆ.ಆರ್.ಪೇಟೆ ಶಿವರಾಜು, ತಗ್ಗಹಳ್ಳಿ ಚಂದ್ರೇಗೌಡ, ಕಲ್ಲಹಳ್ಳಿ ಚಂದ್ರು ಇತರರಿದ್ದರು.