17 C
Bangalore
Monday, December 9, 2019

ಯಶ್ ಪ್ರಚಾರಕ್ಕೆ ಅಡ್ಡಿಪಡಿಸಿ ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡದಂತೆ ಜೆಡಿಎಸ್​​ ಕಾರ್ಯಕರ್ತರಿಂದ ತಾಕೀತು​

Latest News

ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಗೆ ಅಂತ್ಯ ಹಾಡುತ್ತಾ?

ಬೆಂಗಳೂರು: ಕಳೆದ ಆರು ತಿಂಗಳಿನಿಂದ ರಾಜ್ಯದಲ್ಲಿದ್ದ ರಾಜಕೀಯ ಅಸ್ಥಿರತೆಯ ಗ್ರಹಣ ಸೋಮವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಉಪಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಂತೆಯೇ ಜನಾಭಿಪ್ರಾಯ ರೂಪುಗೊಂಡಿದ್ದರೆ, ಬಿಜೆಪಿ...

ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ಮಾಣ

ಹುಬ್ಬಳ್ಳಿ: ಇಲ್ಲಿಯ ಬಿಡ್ನಾಳ ಮುಖ್ಯ ರಸ್ತೆಯಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಗಟಾರ ನಿರ್ವಿುಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ನೀರು ಇರುವುದೇ ಪೋಲು ಮಾಡಲು!

ಹುಬ್ಬಳ್ಳಿ: ಜಲ ಮಂಡಳಿ ತಾನೇ ಹೊಸ ನಿಯಮವೊಂದನ್ನು ಕಂಡುಕೊಂಡಿದೆ. ಅದೇನು ಎನ್ನುವ ಆಶ್ಚರ್ಯವೇ? ನೀರು ಇರುವುದೇ ಪೋಲು ಮಾಡಲು ಎನ್ನುವುದು!

ಈಜಿಪ್ತ್ ಈರುಳ್ಳಿ ಕೊಳ್ಳುವವರೇ ಇಲ್ಲ

ಹುಬ್ಬಳ್ಳಿ: ಇಲ್ಲಿಗೆ ತರಿಸಲಾಗಿದ್ದ ಈಜಿಪ್ತ್ ಈರುಳ್ಳಿಗೆ ಖರೀದಿದಾರರು ಟೆಂಡರ್ ಹಾಕಿಲ್ಲ. ಹೀಗಾಗಿ, ಈಜಿಪ್ತ್ ಈರುಳ್ಳಿಯನ್ನು ಬೇರೆ ಮಾರುಕಟ್ಟೆಗೆ ಕೊಂಡೊಯ್ಯಲಾಗಿದೆ.

ನಿರಾಶೆ ಭಾವ ತಗ್ಗಿಸಿದ ತೃಪ್ತಿ

ಕಲಘಟಗಿ: ಹಳ್ಳಿಗಳ ನಿರುದ್ಯೋಗಿ ಯುವ ಸಮೂಹದಲ್ಲಿ ವಿದ್ಯಾವಂತ ರಾಗಿಯೂ ಉದ್ಯೋಗವಿಲ್ಲ ಎಂಬ ನಿರಾಶೆ ಭಾವನೆಯನ್ನು ಕಿಂಚಿತ್ತಾದರೂ ತಗ್ಗಿಸಿದ ಆತ್ಮತೃಪ್ತಿ ಇದೆ ಎಂದು ಶಾಸಕ...

ಮಂಡ್ಯ: ಪ್ರತಿಷ್ಠೆಯ ಕ್ಷೇತ್ರವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಕಣ ಪರಸ್ಪರ ನಿಂದನೆ ಹಾಗೂ ಟೀಕೆ-ಟಿಪ್ಪಣಿಗಳಿಗೆ ವೇದಿಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಪರ ಪ್ರಚಾರ ನಡೆಸುವ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಹಾಗೂ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್​ ಕಾರ್ಯಕರ್ತರು ನಟ ಯಶ್​ ಪ್ರಚಾರಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಬುಧವಾರ ಮಂಡ್ಯದ ಚಂದೂಪುರ ಗ್ರಾಮದಲ್ಲಿ ನಟ ಯಶ್ ಪ್ರಚಾರ ಮಾಡುವ ಸಂದರ್ಭದಲ್ಲಿ ಸ್ಥಳೀಯ ಜೆಡಿಎಸ್​ ಕಾರ್ಯಕರ್ತರು ಗಲಾಟೆ ನಡೆಸಿ, ಪ್ರಚಾರಕ್ಕೆ ಅಡ್ಡಿ ಪಡಿಸಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಕುಟುಂಬದ ಬಗ್ಗೆ ಯಾರೂ ಹಗುರವಾಗಿ ಮಾತಾಡಬಾರದು ಎಂದು ಒತ್ತಾಯಿಸಿದರು.

ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸುಮಲತಾ ಬೆಂಬಲಿಗರು ಕೂಡ ಮಧ್ಯ ಪ್ರವೇಶಿಸಿದ್ದರಿಂದ ಎರಡು ಗುಂಪುಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಈ ವೇಳೆ ಎರಡು ಗುಂಪುಗಳನ್ನು ಪೊಲೀಸರು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಆದರೂ ಕೂಡ ಎರಡು ಗುಂಪಿನ ಕಾರ್ಯಕರ್ತರು ಪರ-ವಿರೋಧಗಳ ಘೋಷಣೆಗಳನ್ನು ಮುಂದುವರಿಸಿದರು.

ಅಜ್ಜಿ ಮನವಿ ಮೇರೆಗೆ ಮನೆಗೆ ಹೋದ ಯಶ್
ಮದ್ದೂರು ತಾಲೂಕಿನ ಅಣ್ಣಹಳ್ಳಿ ದೊಡ್ಡಿ ಗ್ರಾಮದಲ್ಲಿ ಪ್ರಚಾರಕ್ಕೆ ಹೋಗಿದ್ದ ವೇಳೆ ಅಜ್ಜಿ ಕೆಂಪಮ್ಮ ಅವರ ಪ್ರೀತಿಯ ಕರೆಗೆ ಸ್ಪಂದಿಸಿದ ನಟ ಯಶ್​, ಅವರ ಮನೆಗೆ ಹೋಗಿ ಬಾಳೆಹಣ್ಣು ತಿಂದು ಆಶೀರ್ವಾದ ಪಡೆದುಕೊಂಡರು. ಈ ವೇಳೆ ಸುಮಲತಾ ಅವರಿಗೆ ವೋಟು ಹಾಕುವಂತೆ ಯಶ್ ಮನವಿ ಮಾಡಿದ್ದಕ್ಕೆ ಖಂಡಿತವಾಗಿ ವೋಟು ಹಾಕುವುದಾಗಿ ಅಜ್ಜಿ ಭರವಸೆ ನೀಡಿದರು.

ಯಶ್​ ಕಾರು ತಪಾಸಣೆ
ಪ್ರಚಾರದ ವೇಳೆ ಮದ್ದೂರಿನ ಕೂಳಗೆರೆ ಚೆಕ್​ಪೋಸ್ಟ್​ನಲ್ಲಿ ಚುನಾವಣ ಅಧಿಕಾರಿಗಳಿಂದ ನಟ ಯಶ್​ ಅವರ ವಾಹನವನ್ನು ತಪಾಸಣೆ ನಡೆಸಿದರು. (ದಿಗ್ವಿಜಯ ನ್ಯೂಸ್​)

Stay connected

278,745FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...