ಹಸುವಿನ ಮೈದಡವಿ ಹಾಲು ಕರೆಯುವ ಮೂಲಕ ರೈತನ ಮಗನಲ್ಲ ಎಂದಿದ್ದವರಿಗೆ ಟಾಂಗ್​ ಕೊಟ್ಟ ದರ್ಶನ್​

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಪರ ಅಬ್ಬರದ ಪ್ರಚಾರ ಕೈಗೊಂಡಿರುವ ನಟ ದರ್ಶನ್​ ಅವರು ಸಕ್ಕರೆ ನಾಡಿನ ಗ್ರಾಮವೊಂದರಲ್ಲಿ ಹಸುವಿನ ಹಾಲು ಕರೆಯುವ ಮೂಲಕ ನಾನು ಕೂಡ ರೈತನ ಮಗನೆಂದು ಸಾಂಕೇತಿಕವಾಗಿ ಎದುರಾಳಿಗಳಿಗೆ ಟಾಂಗ್​ ನೀಡಿದರು.

ಗುರುವಾರವೂ ಕೂಡ ಸುಮಲತಾ ಪರ ಭರ್ಜರಿ ಪ್ರಚಾರ ಮುಂದುವರಿಸಿರುವ ದರ್ಶನ್ ಮಂಡ್ಯದ ಹಳ್ಳಿಹಳ್ಳಿಗೂ ಹೋಗಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದರು. ಕೆ.ಆರ್.ಪೇಟೆ ತಾಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕಾಗಿ ತೆರಳಿದ್ದ ವೇಳೆ ಕುಮಾರ್ ಎಂಬ ರೈತನ ಮನೆಯ ಮುಂದೆ ನಿಂತಿದ್ದ ಹಸುವಿನ ಬಳಿ ಹೋಗಿ ಮೈದಡವಿ ಹಾಲು ಕರೆದ ದರ್ಶನ್​ ವಿಶೇಷತೆ ಮೆರೆದರು.

ಇತ್ತೀಚೆಗಷ್ಟೆ ರೈತರ ಮಗನ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿತ್ತು. ಸುಮಲತಾ ಅವರಿಗೆ ಬೆಂಬಲ ನೀಡಿದ ದರ್ಶನ್​ ಹಾಗೂ ಯಶ್​ ವಿರುದ್ಧ ಸಿಎಂ ಕುಮಾರಸ್ವಾಮಿ ಹಾಗೂ ಮಂಡ್ಯ ಜೆಡಿಎಸ್​​ ನಾಯಕರು ಹರಿಹಾಯ್ದಿದ್ದರು. ನಟರನ್ನು ನಂಬಬೇಡಿ ಅವರಿಗೆ ರೈತರ ಕಷ್ಟ ಗೊತ್ತಿಲ್ಲ. ಅವರು ಜೋಡೆತ್ತುಗಳಲ್ಲ, ಕಳ್ಳೆತ್ತುಗಳು ಎಂದು ವಾಗ್ದಾಳಿ ನಡೆಸಿದ್ದರು.

ಇಂದು ನಟ ದರ್ಶನ್​ ಅವರ ಹಾಲು ಕರೆಯುವ ಮೂಲಕ ನಾನೂ ಕೂಡ ರೈತನ ಮಗನೆಂದು ನಿರೂಪಿಸಿದರು. ಈ ಮೂಲಕ ತಮ್ಮ ವಿರುದ್ಧ ಮಾಡಿದ್ದ ಟೀಕೆಗಳಿಗೆ ತನ್ನ ಕೆಲಸದ ಮೂಲಕವೇ ದರ್ಶನ್​ ಉತ್ತರ ನೀಡಿದರು. (ದಿಗ್ವಿಜಯ ನ್ಯೂಸ್​)

ಮಗನೇ ದರ್ಶನ್ ನೀನು ಈ ಕಾರಣಕ್ಕೆ ಇಷ್ಟ …

Sumalatha Ambareesh ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 11, 2019