More

    ಮಂಚಿ-ಕೊಳ್ನಾಡು ಪ್ರೌಢಶಾಲೆ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

    ಬಂಟ್ವಾಳ: ಪ್ರಾಚೀನ ಕಾಲದ ಜೀವನ ಸಂಸ್ಕಾರ ಮಾದರಿಯಾಗಿತ್ತು. ಒಂದು ಮನೆಯ ಹಣತೆ ಆ ಮನೆಗೆ ಬೆಳಕಾಗುವ ಜತೆಗೆ ದಾರಿಯಲ್ಲಿ ಸಾಗುವ ಜನರ ದೀವಟಿಕೆಗಳಿಗೂ ಬೆಳಕು ನೀಡುತ್ತಿದ್ದವು. ಮನಸ್ಸುಗಳನ್ನು ಕಟ್ಟುವ, ಬೆಸೆಯುವ, ಬೆಳಕಾಗುವ ಕಾಲವೊಂದಕ್ಕೆ ಮತ್ತೆ ಸಿದ್ಧವಾಗುವ ಅನಿವಾರ್ಯತೆ, ಜವಾಬ್ದಾರಿ ಇಂದು ಮೂಡಬೇಕು ಎಂದು ಸಾಹಿತಿ ಡಾ.ನರೇಂದ್ರ ರೈ ದೇರ್ಲ ಹೇಳಿದರು.

    ಮಂಚಿ-ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ, ಸತ್‌ಚಿಂತನೆ ಮತ್ತು ಸದ್ವಿಚಾರಗಳನ್ನು ಮೈಗೂಡಿಸಿಕೊಂಡು ಕಾರ್ಯೋನ್ಮುಖರಾಗಿ ಶಾಲೆಯ ಪ್ರಗತಿಯಲ್ಲಿ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಗಳು ಪಾಲುದಾರರಾಗಬೇಕು ಎಂದರು.

    ಮುಖ್ಯ ಶಿಕ್ಷಕಿ ಸುಶೀಲಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಕೊಟ್ಟಾರಿ, ಸಂಘದ ಸಹ ಕಾರ್ಯದರ್ಶಿ ದೇವಕಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಿವಾಕರ ಕುಂಟೂರು ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ಪ್ರಭು ವರದಿ ವಾಚಿಸಿದರು. ರಮಾನಂದ ನೂಜಿಪ್ಪಾಡಿ ವಂದಿಸಿದರು. ಸುಬ್ರಹ್ಮಣ್ಯ ಕೈಯೂರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ರಾಮ್ಪ್ರಸಾದ್ ರೈ ತಿರುವಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತ್ ಶೆಟ್ಟಿ ಮಂಚಿ ಮತ್ತು ಕೋಶಾಧಿಕಾರಿಯಾಗಿ ರಮಾನಂದ ನೂಜಿಪ್ಪಾಡಿ ಆಯ್ಕೆಯಾದರು.

    ನಿವೃತ್ತ ಶಿಕ್ಷಕರಿಗೆ ಸನ್ಮಾನ: ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಧರ ಸಿ., ಎಸ್.ಎಸ್ ರಾವ್, ಪುರುಷೋತ್ತಮ ಟಿ., ರಾಮಚಂದ್ರ ಉಪಾಧ್ಯಾಯ, ದೇವದಾಸ ಕೆ., ಶ್ರೀರಾಮ ಮೂರ್ತಿ ಹಾಗೂ ಸರೋಜಿನಿ ಇವರನ್ನು ಸನ್ಮಾನಿಸಲಾಯಿತು. ಶಾಲೆಯ ಸಭಾಂಗಣದ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಿದ ಗಣೇಶ್ ಪ್ರಭು ಹಾಗೂ ವಿಶ್ವನಾಥ ನಾಯ್ಕ್ ನಿರ್ಬೈಲು ಇವರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts