ಮದ್ದೂರು: ತಾಲೂಕಿನ ಬೆಸಗರಹಳ್ಳಿಯ ಮಾನಸ ಆಂಗ್ಲ ಮಾಧ್ಯಮ ಶಾಲೆಗೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.82ರಷ್ಟು ಹಾಗೂ ಎಚ್.ಡಿ.ದೇವೇಗೌಡ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇ.78ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಮಾನಸ ಆಂಗ್ಲ ಮಾಧ್ಯಮ ಶಾಲೆಯ ಎಸ್.ನಿಶ್ಚಲ್ 620 ಶೇ.(99.02) ಅಂಕ ಪಡೆದು ರಾಜ್ಯಕ್ಕೆ 6 ನೇ ಸ್ಥಾನ, ಜಯಂತ್ 618 ಶೇ.(98.88) ಅಂಕ ಪಡೆದು ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಆರ್.ಅಶುತೋಷ್ 604 ಶೇ.(96.64) ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿ, ಪ್ರಥಮ ಹಾಗೂ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಮಾನಸ ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್, ಕಾರ್ಯದರ್ಶಿ ಎಚ್.ಪಿ.ನಾಗರಾಜು, ಮುಖ್ಯ ಶಿಕ್ಷಕರಾದ ಪಲ್ಲವಿ, ಶರತ್, ಬಸವರಾಜು ಮತ್ತು ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಅಭಿನಂದಿಸಿದ್ದಾರೆ.