ಪಾಕ್​ ಸುಂದರಿಗೆ ಮಾರುಹೋಗಿ BSFನ ಅತಿ ಸೂಕ್ಷ್ಮ ಮಾಹಿತಿ ಸೋರಿಕೆ; ಆರೋಪಿ ಅರೆಸ್ಟ್​

ಅಹಮದಾಬಾದ್​: ಗಡಿ ಭದ್ರತಾ ಪಡೆ(BSF)ಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವ ಪಾಕ್​ ಗೂಢಾಚಾರಿಣಿಯ ಅಂದಕ್ಕೆ ಮಾರುಹೋಗಿ ಆಕೆಯ ಜೊತೆ ದೇಶಕ್ಕೆ ಸಂಬಂಧಿಸಿದ ಹಲವು ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ. ಬಂಧಿತನನ್ನು ನಿಲೇಶ್​ ಬಲಿಯಾ ಎಂದು ಗುರುತಿಸಲಾಗಿದ್ದು, ಈತ ಬಿಎಸ್​ಎಫ್​ನಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಎಂದು ತಿಳಿದು ಬಂದಿದೆ. ಭುಜ್​ನಲ್ಲಿರುವ ಬಿಎಸ್​ಎಫ್​ ಲೋಕೋಪಯೋಗಿ ಇಲಾಖೆಯ ಎಲೆಕ್ಟ್ರಿಕಲ್​ ವಿಭಾಗದಲ್ಲಿ ಈತ ಆಫೀಸ್​ ಬಾಯ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎಟಿಎಸ್​ ವರಿಷ್ಠಾಧಿಕಾರಿ ಸುನೀಲ್​ … Continue reading ಪಾಕ್​ ಸುಂದರಿಗೆ ಮಾರುಹೋಗಿ BSFನ ಅತಿ ಸೂಕ್ಷ್ಮ ಮಾಹಿತಿ ಸೋರಿಕೆ; ಆರೋಪಿ ಅರೆಸ್ಟ್​