French: ವಾಹನದ ಲೈಸೆನ್ಸ್ ಇಲ್ಲದೆ 28 ವರ್ಷಗಳಿಗೂ ಹೆಚ್ಚು ಕಾಲ ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದ ವ್ಯಕ್ತಿಯನ್ನು ಇದೀಗ ಖಾಕಿ ಬಂಧಿಸಿದ ಘಟನೆ ಫ್ರೆಂಚ್ನಲ್ಲಿ ನಡೆದಿದೆ.

ಫ್ರೆಂಚ್ ವ್ಯಕ್ತಿಯೊಬ್ಬ ಪರವಾನಗಿ, ವಿಮೆ ಯಾವುದೇ ತಾಂತ್ರಿಕ ತಪಾಸಣೆ ಇಲ್ಲದೆ ತನ್ನ ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. 28 ವರ್ಷಗಳಿಗೂ ಹೆಚ್ಚು ಕಾಲ ಪೊಲೀಸರ ಕೈಗೆ ಸಿಗದೆ ಈ ವ್ಯಕ್ತಿ ಹೇಗೆ ತಪ್ಪಿಸಿಕೊಳ್ಳುತ್ತಿದ್ದನೆಂದು ಪೊಲೀಸರು ಆಘಾತಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಯುಕೆ ಶ್ರೀಮಂತರ ಪಟ್ಟಿ 2025: ಸತತ 4ನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡ ಹಿಂದೂಜಾ ಕುಟುಂಬ! Hinduja family
ಮೇ ತಿಂಗಳಲ್ಲಿ, ರೋನ್‌ನಲ್ಲಿ ನಿಯಮಿತ ತಪಾಸಣೆಯ ಸಮಯದಲ್ಲಿ,ಫ್ರಾನ್ಸ್ ಸಂಚಾರ ಪೊಲೀಸರು ಲೈಸೆನ್ಸ್ನ್ನು ಪರಿಶೀಲಿಸುತ್ತಿದ್ದರು ಮತ್ತು ಅವಧಿ ಮೀರಿದ ತಾಂತ್ರಿಕ ತಪಾಸಣೆಗಾಗಿ ಆ ವ್ಯಕ್ತಿಯ ವಾಹನವನ್ನು ಎಳೆದುಕೊಂಡು ಹೋಗಿದ್ದರು. ನಂತರ
ಅವನ ದಾಖಲೆಗಳನ್ನು ಮತ್ತಷ್ಟು ಪರಿಶೀಲಿಸಿದಾಗ, ಅಧಿಕಾರಿಗಳು ವಾಹನಕ್ಕೆ ವಿಮೆ ಮಾಡಲಾಗಿಲ್ಲ ಎಂದು ಕಂಡುಹಿಡಿದರು. ಮತ್ತು ಆ ವ್ಯಕ್ತಿಯ ಲೈಸೆನ್ಸ್ನ್ನು 1997ರಲ್ಲಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
28 ವರ್ಷಗಳ ಹಿಂದೆ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವಾಗ ಸಿಕ್ಕಿಬಿದ್ದ ನಂತರ ತನ್ನ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಆ ವ್ಯಕ್ತಿ ಅಧಿಕಾರಿಗಳಿಗೆ ಹೇಳಿದ್ದಾನೆ. ಅಂದಿನಿಂದ ಅವನು ತನ್ನ ಹಳೆಯ ಪರವಾನಗಿಯನ್ನು ಇಟ್ಟುಕೊಂಡಿದ್ದಾನೆ ಮತ್ತು ಹೊಸ ಲೈಸೆನ್ಸ್ಗೆ ಮತ್ತೆ ಅರ್ಜಿ ಸಲ್ಲಿಸುವ ಚಿಂತೆಗೆ ಹೋಗಲೇ ಇಲ್ಲ.
ಇದನ್ನೂ ಓದಿ: ಗ್ರಾಹಕರಿಗೆ ಸಲಹಾ ಸೇವೆ ನೀಡಲು ಬ್ರಾಂಡ್ & ಮಾರ್ಕೆಟಿಂಗ್ ಕನ್ಸಲ್ಟಿಂಗ್ ಗ್ರೂಪ್ ಪ್ರಾರಂಭಿಸಿದ ಆರ್ ಕೆ ಸ್ವಾಮಿ! R K SWAMY
ನಂತರ ಆ ವ್ಯಕ್ತಿಯ ಎಲ್ಲಾ ಫೈಲ್‌ಗಳನ್ನು ಪರಿಶೀಲಿಸಿದಾಗ ವಾಹನಕ್ಕೆ ಯಾವುದೆ ವಿಮೆ ಮಾಡಿಸಿಲ್ಲ ಜೊತೆಗೆ ಅವನ ಲೈಸೆನ್ಸ್ ಪರಿಶೀಲಿಸಿದಾಗ ಆ ವ್ಯಕ್ತಿ 1997 ರಿಂದ ಪರವಾನಗಿ ಇಲ್ಲದೆ ವಾಹನ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.
ಆ ವ್ಯಕ್ತಿ ತನ್ನ ಬಳಿ ಪರವಾನಗಿ ಇಲ್ಲದಿದ್ದರೆ, ತನ್ನ ವಾಹನಕ್ಕೆ ಕಡ್ಡಾಯ ವಿಮೆಯನ್ನು ಪಡೆಯುವುದರಲ್ಲಿ ಅಥವಾ ತಾಂತ್ರಿಕ ತಪಾಸಣೆಗಾಗಿ ಅದನ್ನು ತರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಿರ್ಧರಿಸಿದ್ದಾನೆ. ಇಷ್ಟು ವರ್ಷಗಳ ಕಾಲ ಅವನು ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದನೆಂದು ನೋಡಿ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ. ಶೀಘ್ರದಲ್ಲೇ ಅವನು ನ್ಯಾಯಾಲಯಕ್ಕೆ ಹಾಜರಾಗಲಿದ್ದಾನೆ. (ಏಜೆನ್ಸೀಸ್)