More

    ನಡುರಸ್ತೆಯಲ್ಲಿ ಡೆಲಿವರಿ ಬಾಯ್‌ಗೆ ಮನಬಂದಂತೆ ಥಳಿತ

    ನೊಯ್ಡಾ: ನಡುರಸ್ತೆಯಲ್ಲಿ ಡೆಲಿವರಿ ಬಾಯ್‌ಗೆ ಮನಸ್ಸಿಗೆ ಬಂದಂತೆ ಥಳಿಸಿರುವ ಘಟನೆ ಉತ್ತರಪ್ರದೇಶದ ನೊಯ್ಡಾದ ಸೆಕ್ಟರ್ 99ರಲ್ಲಿ ನಡೆದಿದೆ. ಸೊಸೈಟಿಯ ನಿವಾಸಿಯೊಬ್ಬರು ಅಮಾನುಷವಾಗಿ ಹಲ್ಲೆ ನಡೆಸಿರುವ ಕೃತ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.

    ಒನ್-ಟೈಮ್ ಪಾಸ್‌ವರ್ಡ್(OTP) ಕಾರಣದಿಂದಾಗಿ ಡೆಲಿವರಿ ಬಾಯ್​ ಮೇಲೆ ಹಲ್ಲೆ ನಡೆಸಲಾಗಿದ್ದು, ಈ ಘಟನೆಯು ನೆಟ್ಟಿಗರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಭೀಕರ ಅಪಘಾತದಲ್ಲಿ ಪ್ರಾಣಕಳೆದುಕೊಂಡ ಕಿರುತೆರೆ ನಟಿ

    ದೃಶ್ಯದಲ್ಲಿ ಏನಿದೆ?
    24 ಸೆಕೆಂಡುಗಳ ಅವಧಿಯ ವೀಡಿಯೊ ಕ್ಲಿಪ್‌ನಲ್ಲಿ, ಕೋಪಗೊಂಡ ವ್ಯಕ್ತಿ ರೆಸಿಡೆನ್ಶಿಯಲ್ ಸೊಸೈಟಿಯೊಳಗೆ ರಸ್ತೆಯ ಮಧ್ಯದಲ್ಲಿ ಡೆಲಿವರಿ ಬಾಯ್​ನನ್ನು ಹಿಂಸಾತ್ಮಕವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ನಿರಂತರ ಹಲ್ಲೆಯ ಮಧ್ಯೆ, ಡೆಲಿವರಿ ಬಾಯ್ ದೂರ ಸರಿಯುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts