More

  VIDEO | ನಡುರಸ್ತೆಯಲ್ಲೇ ಗನ್​ ತೋರಿಸಿ, ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು; ಬಿಜೆಪಿ ಮಂಡಲ ಉಸ್ತುವಾರಿ ವಿರುದ್ಧ ಕೇಸ್​ ದಾಖಲು!

  ಉತ್ತರಪ್ರದೇಶ: ದೊಣ್ಣೆ ಹಿಡಿದು ಓರ್ವನ ಮೇಲೆ ಮನಬಂದಂತೆ ಥಳಿಸಿದ ಘಟನೆಯೊಂದು ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಘಟನೆ ಉತ್ತರಪ್ರದೇಶದ ಸುಲ್ತಾನ್‌ಪುರದಲ್ಲಿ ವರದಿಯಾಗಿದೆ.

  ಇದನ್ನೂ ಓದಿ: ಅಂಡರ್‌ ಪಾಸ್‌ ನಿರ್ಮಿಸುವಂತೆ ಆಗ್ರಹಿಸಿ ಹೆದ್ದಾರಿ ತಡೆ ನಡೆಸಿದ ಕಾಂಗ್ರೆಸ್ಸಿಗರು

  ಬಂದೂಕು ತೋರಿಸಿ ಹತ್ಯೆಗೈಯುವ ಬೆದರಿಕೆ ಹಾಕಿದ ಐವರು ಗುಂಪೊಂದು ವ್ಯಕ್ತಿಯನ್ನು ನಡುರಸ್ತೆಯಲ್ಲೇ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದೆ. ಈ ಭಯಾನಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ.

  ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕುದ್ವಾರದ ಬಿಜೆಪಿ ಮಂಡಲ ಉಸ್ತುವಾರಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದುಷ್ಕರ್ಮಿಗಳು ಯುವಕನನ್ನು ನಡುರಸ್ತೆಯಲ್ಲೇ ಸುತ್ತುವರಿದು ಅಮಾನುಷವಾಗಿ ಥಳಿಸಿದ್ದು, ಪಿಸ್ತೂಲ್ ತೋರಿಸಿ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ ಎಂದು ವರದಿಯಾಗಿದೆ.

  ಇದನ್ನೂ ಓದಿ: 24 ಗಂಟೆಗಳಲ್ಲಿ 450 ಹಮಾಸ್​ ಕೇಂದ್ರಗಳ ಮೇಲೆ ಗುರಿ ಇಟ್ಟ ಇಸ್ರೇಲ್​; ಹಮಾಸ್​ ಮಿಲಿಟರಿ ಕಂಪೌಂಡ್ ವಶಕ್ಕೆ..

  ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಲ್ಲ. ಹಲ್ಲೆಗೊಳಗಾದ ವ್ಯಕ್ತಿ, ತನ್ನನ್ನು ಥಳಿಸಲು ಹಿಂದಿರುವ ಕಾರಣವನ್ನಾದರೂ ತಿಳಿಸುವಂತೆ ಮನವಿ ಮಾಡಿದರು ಸಹ ಅದಕ್ಕೆ ಸ್ಪಂದಿಸದ ಕಿಡಿಗೇಡಿಗಳು, ಮನಬಂದಂತೆ ಥಳಿಸುವುದನ್ನು ಮುಂದುವರಿಸಿರುವುದು ವಿಡಿಯೋದಲ್ಲಿ ಕಾಣಬಹುದು.

  ದಾಳಿಕೋರರನ್ನು ದೇವಲ್‌ಪುರ ನಿವಾಸಿಗಳಾದ ಗೌರವ್ ಸಿಂಗ್, ಉಜ್ವಲ್ ಸಿಂಗ್, ಶುಭಂ ಸಿಂಗ್, ನೌಗ್ವಂತಿರ್ ನಿವಾಸಿ ವಿಪಿನ್ ಸಿಂಗ್ ಮತ್ತು ಬಿಜೆಪಿ ಮಂಡಲ ಉಸ್ತುವಾರಿ ಅವಧೇಶ್ ಶರ್ಮಾ ಮತ್ತು ಭಗವಾನ್‌ಪುರ ನಿವಾಸಿ ಆದಿತ್ಯ ಶರ್ಮಾ ಎಂದು ಗುರತಿಸಲಾಗಿದೆ. ಆರೋಪಿಗಳು ಉತ್ಮಾಪುರದ ಇಟ್ಟಿಗೆ ಭಟ್ಟಿಯೊಂದರ ಬಳಿ ಹೊಂಚು ಹಾಕಿ ಕುಳಿತಿದ್ದರು ಎಂದು ಹೇಳಲಾಗಿದೆ.

  ಇದನ್ನೂ ಓದಿ: ಭೂಕುಸಿತಕ್ಕೆ ಓರ್ವ ಸಾವು!; ಮುಂದಿನ 5 ದಿನಗಳ ಕಾಲ ಈ ರಾಜ್ಯಕ್ಕೆ ಭಾರೀ ಮಳೆಯ ಮುನ್ಸೂಚನೆ

  ಹಲ್ಲೆ ನಡೆದ ಬಳಿಕ ತಮ್ಮ ತಂದೆಯೊಂದಿಗೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ ಸಂತ್ರಸ್ತ ವ್ಯಕ್ತಿ, ಈ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ಮುಂದಾಗಿದ್ದರು. ಆದರೆ, ಪೊಲೀಸರು ಪ್ರಕರಣವನ್ನು ದಾಖಲಿಸದೆ ಸಂತ್ರಸ್ತ ಮತ್ತು ಆತನ ತಂದೆಯನ್ನು ಠಾಣೆಯಿಂದ ಕಳುಹಿಸಿದ್ದಾರೆ. ಇದಾದ ನಂತರ ಆತ ಎಸ್ಪಿ ಸೋಮೆನ್ ಬರ್ಮಾ ಅವರನ್ನು ಸಂಪರ್ಕಿಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

  ಎಸ್ಪಿ ಅವರ ಆದೇಶದ ಬೆನ್ನಲ್ಲೇ ವಿಷಯ ತಿಳಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರು ವಿಡಿಯೋ ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

  ಇದನ್ನೂ ಓದಿ:  ಇನ್ನೂ 1 ತಿಂಗಳು ಕಾಲುವೆಗೆ ನೀರು ಹರಿಸಲು ಆಗ್ರಹ; ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

  “ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕೂಡಲೇ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

  ಭೂಕುಸಿತಕ್ಕೆ ಓರ್ವ ಸಾವು!; ಮುಂದಿನ 5 ದಿನಗಳ ಕಾಲ ಈ ರಾಜ್ಯಕ್ಕೆ ಭಾರೀ ಮಳೆಯ ಮುನ್ಸೂಚನೆ

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts