ನೆಲಮಂಗಲ: ಐವತ್ತು ವರ್ಷದ ವ್ಯಕ್ತಿಯೊಬ್ಬ 11 ವರ್ಷದ ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ತಾನೂ ಚಾಕು ಚುಚ್ಚಿಕೊಂಡಿದ್ದಾನೆ. ಪರಿಣಾಮವಾಗಿ ಇಬ್ಬರೂ ಸಾವಿಗೀಡಾಗಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.
ಉತ್ತರಾಖಂಡ ಮೂಲದ ಖುಷಿ (11) ಚಾಕು ಇರಿತಕ್ಕೆ ಒಳಗಾಗಿ ಸಾವಿಗೀಡಾದ ಬಾಲಕಿ. ಹರಿಯಾಣ ಮೂಲದ ನಂದಕಿಶೋರ್ (50), ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಬೆಂಗಳೂರು ಉತ್ತರ ತಾಲೂಕಿನ ಜಿಂದಾಲ್ ಕ್ವಾರ್ಟರ್ಸ್ನಲ್ಲಿ ಈ ಘಟನೆ ನಡೆದಿದೆ.
ಖುಷಿಯ ತಂದೆ ಲಕ್ಷ್ಮಣ್ ಸಿಂಗ್ ಹಾಗೂ ಆರೋಪಿ ನಂದಕಿಶೋರ್ ಜಿಂದಾಲ್ ಕಂಪನಿ ನೌಕರರು. ನಂದಕಿಶೋರ್ ಬಾಲಕಿಯ ಬಳಿ ಅಸಭ್ಯವಾಗಿ ವರ್ತಿಸಿದ್ದ. ಆಕೆ ಅದನ್ನು ಪಾಲಕರಿಗೆ ತಿಳಿಸಿದ್ದಳು. ಬಳಿಕ ಸುದ್ದಿ ಕಂಪನಿಗೂ ತಲುಪಿತ್ತು. ಬಾಲಕಿಯ ಆರೋಪದಿಂದಾಗಿ ಕ್ವಾರ್ಟರ್ಸ್ ಖಾಲಿ ಮಾಡುವಂತೆ ನಂದಕಿಶೋರ್ಗೆ ಕಂಪನಿ ನೋಟಿಸ್ ಜಾರಿಗೊಳಿಸಿತ್ತು.
ಅಸಭ್ಯವಾಗಿ ವರ್ತಿಸಿದ ವಿಷಯ ಬಹಿರಂಗಗೊಂಡಿದ್ದಕ್ಕೆ ಸಿಟ್ಟಾದ ನಂದಕಿಶೋರ್ ಖುಷಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆಕೆ ಸಾವಿಗೀಡಾಗಿದ್ದಾಳೆ. ಬಳಿಕ ನಂದಕಿಶೋರ್ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಾವಿಗೀಡಾಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಮ್ಮೆಗೆ ಬುಲೆಟ್ ಡಿಕ್ಕಿ: ಎಮ್ಮೆ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ, ತಾಯಿ-ಮಗು ಪರಿಸ್ಥಿತಿ ಚಿಂತಾಜನಕ..
ಕೋವಿಡ್ ಟೈಮ್ನಲ್ಲಿ ಕೂಡ ಐದು ರೂಪಾಯಿಯನ್ನೂ ಬಿಡದ ಅನಿರುದ್ಧ್: ನಿರ್ದೇಶಕನ ಆರೋಪ
ಸೈಕ್ಲೋನ್ ಎಫೆಕ್ಟ್‌ನಿಂದ ರಾಜ್ಯದಲ್ಲಿ ಮಳೆ; ನಾಳೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್