ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕೆಟ್ಟ ಆಹಾರ ಪೂರೈಕೆಯ ವಿಡಿಯೋ ವೈರಲ್; ದಂಡ ವಿಧಿಸಿದ ಐಆರ್​​ಸಿಟಿಸಿ

ನವದೆಹಲಿ: ಪ್ರೀಮಿಯಂ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಾಳಾದ ಆಹಾರವನ್ನು ಪ್ರಯಾಣಿಕರಿಗೆ ನೀಡುತ್ತಿರುವ ವಿಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಕೆಟ್ಟ ಆಹಾರ ನೋಡಿದ ಪ್ರಯಾಣಿಕರು ದೂರುತ್ತಿದ್ದಾರೆ. ಈ ವಿಡಿಯೋ ವೈರಲ್ ಆದಾಗ, ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಅಂದರೆ IRCTC ಕೂಡ ಕೋಪಗೊಂಡು ಸೇವಾ ಪೂರೈಕೆದಾರರಿಗೆ 25,0000 ರೂಪಾಯಿ ದಂಡ ವಿಧಿಸಿದೆ. ಈ ವಿಡಿಯೋದಲ್ಲಿ ಪ್ರಯಾಣಿಕರು ಸಿಬ್ಬಂದಿಗೆ ಆಹಾರವನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಕೇಳುತ್ತಿದ್ದಾರೆ. ಸಿಬ್ಬಂದಿ ತಟ್ಟೆಯನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವುದು ಸಹ ಕಂಡುಬರುತ್ತದೆ. ದೂರು … Continue reading ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕೆಟ್ಟ ಆಹಾರ ಪೂರೈಕೆಯ ವಿಡಿಯೋ ವೈರಲ್; ದಂಡ ವಿಧಿಸಿದ ಐಆರ್​​ಸಿಟಿಸಿ