ದಾವಣಗೆರೆ: ಹಳೇ ಚಿನ್ನದ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಹಳೆಯ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ಹೇಳಿ 7 ಲಕ್ಷ ರೂ. ಲಪಟಾಯಿಸಿದ ಆರೋಪದಡಿ ನಾಲ್ವರ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬಯಿ ಮೂಲದ ಗುಲಾಬ್‌ಚಂದ್ ಶೀತಲ್ ಪ್ರಸಾದ್ ಗುಪ್ತಾ ಮೋಸ ಹೋದವರು. ವಂಚಕರಾದ ಹರ್ಷದ್ ರಾಜಕುಮಾರ್, ರಮೇಶ್, ಅಮಿತ್ ಶೇಖ್ ಹಾಗೂ ಜೀಶಾನ್ ಶೇಖ್, ತಮ್ಮ ಬಳಿ ಇರುವ ಹಳೆಯ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ಮಾರುವುದಾಗಿ ಹೇಳಿದ್ದರು.
ವಂಚಕರು ಗುಪ್ತಾ ಭೇಟಿಗೆಂದು ಸ್ಥಳ ನಿಗದಿ ಮಾಡಿ ಬಳಿಕ ಎರಡು ಕಡೆ ಜಾಗ ಬದಲಿಸಿದ್ದರು. ಅವರು ಹೇಳಿದಂತೆ ತೆರಳಿದ್ದ ಗುಪ್ತಾ ಅವರಿಂದ ದಾವಣಗೆರೆ ಲೋಕಿಕೆರೆ ರಸ್ತೆ ಬಳಿ ಹಣ ಲಪಟಾಯಿಸಿದ್ದರು. ಜು.18ರಂದು ಘಟನೆ ನಡೆದಿದ್ದು, ಶುಕ್ರವಾರ ಪ್ರಕರಣ ದಾಖಲಾಗಿದೆ.