ಪತ್ನಿಯನ್ನು ಕಾಪಾಡಲು ಬಂದ ಪೊಲೀಸ್​ ಅಧಿಕಾರಿಯ ಮೂಗು ಮುರಿದು ಎಸ್ಕೇಪ್​ ಆದ ಗಂಡ!

ಕೊಟ್ಟಾಯಂ: ರೂಮಿನಲ್ಲಿ ಕೂಡಿ ಹಾಕಿದ ಪತ್ನಿಯನ್ನು ಬಿಡಿಸಲು ಬಂದ ಪೊಲೀಸ್​ ಅಧಿಕಾರಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ. ಜಿಬಿನ್​ ಲೋಬೋ, ಹಲ್ಲೆಗೊಳಗಾದ ಪಾಂಪಡಿ ಪೊಲೀಸ್​ ಠಾಣೆಯ ಸೀನಿಯರ್​ ಸಿವಿಲ್​ ಪೊಲೀಸ್​ ಅಧಿಕಾರಿ. ಹಲ್ಲೆಯಿಂದಾಗಿ ಅಧಿಕಾರಿಯ ಮೂಗು ಮುರಿದಿದೆ ಮತ್ತು ಕಣ್ಣಿನ ರೆಪ್ಪೆಯಲ್ಲಿ ಗಾಯವಾಗಿದ್ದು, ಕೊಟ್ಟಾಯಂ ಮೆಡಿಕಲ್​​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಸ್ಯಾಮ್​ ಝಕಾರಿಯಾ (42) ಎಂದು ಗುರುತಿಸಲಾಗಿದೆ. ಈತ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಇದನ್ನೂ … Continue reading ಪತ್ನಿಯನ್ನು ಕಾಪಾಡಲು ಬಂದ ಪೊಲೀಸ್​ ಅಧಿಕಾರಿಯ ಮೂಗು ಮುರಿದು ಎಸ್ಕೇಪ್​ ಆದ ಗಂಡ!