ರೀಲ್ಸ್​ ಮಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಪತ್ನಿ: ಸಿಟ್ಟಿಗೆದ್ದ ಗಂಡನಿಂದ ನಡೆಯಿತು ಘೋರ ಕೃತ್ಯ

ಚೆನ್ನೈ: ರೀಲ್ಸ್​ ಮಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಪತ್ನಿಯನ್ನು ಪತಿರಾಯನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್​ ಜಿಲ್ಲೆಯ ಭಾನುವಾರ ರಾತ್ರಿ ನಡೆದಿದೆ. ಚಿತ್ರಾ ಕೊಲೆಯಾದ ದುರ್ದೈವಿ. ಅಮೃತಲಿಂಗಂ (38) ಬಂಧಿತ ಪತಿ. ಈತ ದಿಂಡಿಗಲ್​ ಮೂಲದವನು. ದಂಪತಿ ತಿರುಪ್ಪೂರ್​ನ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದರು. ತೆನ್ನಂಪಾಳ್ಯಂನ ತರಕಾರಿ ಮಾರುಕಟ್ಟೆಯಲ್ಲಿ ಅಮೃತಲಿಂಗಂ ದಿನಗೂಲಿ ನೌಕರನಾಗಿದ್ದ. ಚಿತ್ರಾ ಗಾರ್ಮೆಂಟ್​ ಕಾರ್ಖಾನೆಯ ಉದ್ಯೋಗಿಯಾಗಿದ್ದಳು. ಈ ಮೊದಲು ಟಿಕ್​ಟಾಕ್​ ವಿಡಿಯೋಗಳನ್ನು ಮಾಡುತ್ತಿದ್ದ ಚಿತ್ರಾ, ಟಿಕ್​ಟಾಕ್​ ಬ್ಯಾನ್​ ಆದ ಬಳಿಕ ಇನ್​ಸ್ಟಾಗ್ರಾಂ ರೀಲ್ಸ್​ … Continue reading ರೀಲ್ಸ್​ ಮಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದ ಪತ್ನಿ: ಸಿಟ್ಟಿಗೆದ್ದ ಗಂಡನಿಂದ ನಡೆಯಿತು ಘೋರ ಕೃತ್ಯ