ಕಲಬುರಗಿ: ಮಹಿಳೆಯೊಬ್ಬಳು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪುರುಷನನ್ನು ತನ್ನ ಮತ್ತೊಬ್ಬ ಪ್ರಿಯಕರನ ಸಹಾಯದೊಂದಿಗೆ ಕೊಲೆಗೈದಿರುವ ಪ್ರಕರಣ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕಮಲಾಪುರ ತಾಲೂಕಿನ ಬೆಳಕೋಟಾ ಗ್ರಾಮದ ನಿವಾಸಿ, ಲ್ಯಾಬ್ ಟೆಕ್ನಿಶಿಯನ್ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಎಂಬಾತ ಕೊಲೆಯಾದವ.
ಕೊಲೆಯಾದ ಸಿದ್ದಪ್ಪ ಅನಸೂಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಅನಸೂಯಾ ಜೊತೆಗೆ ಆಕೆಯ ಮಗಳ ಮೇಲೂ ಕಣ್ಣು ಹಾಕಿದ್ದ. ತಾಯಿ ಮಗಳ ಜೊತೆ ಸರಸ ಆಡೋದಕ್ಕೆ ಅನಸುಯಾಗೆ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ. ಸಿದ್ದಪ್ಪನ ಕಾಟ ತಾಳಲಾರದೆ ಅವನನ್ನು ಕೊಲೆ ಮಾಡುವುದಕ್ಕೆ ಅನಸೂಯ ಪ್ಲ್ಯಾನ್ ಮಾಡಿದಳು. ತನ್ನ ಮತ್ತೊಬ್ಬ ಪ್ರಿಯಕರ ಶಿವಕುಮಾರ್ ಜೊತೆ ಸೇರಿ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಇದನ್ನೂ ಓದಿ: ’83’ ಚಿತ್ರದ ನಿರ್ಮಾಪಕರ ವಿರುದ್ಧ ಕೇಸ್! ನಟಿ ದೀಪಿಕಾ ಪಡುಕೋಣೆಗೂ ಎದುರಾಯ್ತು ಸಂಕಷ್ಟ
ಕೊಲೆ ಮಾಡಿದ್ರೆ 50 ಸಾವಿರ ರೂಪಾಯಿ ಕೊಡ್ತೀನಿ ಅಂತ ಮತ್ತೊಬ್ಬ ಆರೋಪಿ ಗೋವಿಂದ್ ಎಂಬುವನನ್ನು ಶಿವಕುಮಾರ್ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಅಪರಾಧದಲ್ಲಿ ಭಾಗಿಯಾದ ಮೂವರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅನಸೂಯಾ, ಶಿವಕುಮಾರ್ ಮತ್ತು ಗೋವಿಂದ್ ಬಂಧಿತರು.
ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ತೀವ್ರ ವಿರೋಧ: ಇದು ಜೀವನಶೈಲಿ ಬದಲಿಸುವ ಕೃತ್ಯ ಎಂದ ಸ್ವಾಮೀಜಿ