6 ವರ್ಷದ ಮಗಳನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ತಂದೆಗೆ ಮರಣ ದಂಡನೆ

ಭೋಪಾಲ್​: ಆರು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿದ್ದ ತಂದೆಗೆ ವಿಶೇಷ ನ್ಯಾಯಾಲಯ ಸೋಮವಾರ ಮರಣ ದಂಡನೆ ವಿಧಿಸಿದೆ.

42 ವರ್ಷದ ವ್ಯಕ್ತಿ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ ಹಾಗೂ ಸಂತ್ರಸ್ತ ಬಾಲಕಿ ತನ್ನ ಮಗಳಲ್ಲ ಎಂದು ಆರೋಪಿಸಿ ಆಕೆ ಜತೆ ಅನುಚಿತವಾಗಿ ವರ್ತಿಸುವುದರ ಜತೆ, ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗಿಸಿಕೊಂಡಿದ್ದ. ಅತ್ಯಾಚಾರ ಎಸಗಿದ ನಂತರ ಆಕೆ 2017ರ ಮಾರ್ಚ್​ 15 ರಂದು ಆಕೆಗೆ ನೇಣು ಹಾಕಿದ್ದಾನೆ.

ಬಾಲಕಿ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಗಿತ್ತು. ಅಲ್ಲದೆ ಮೃತ ಬಾಲಕಿಯ ಡಿಎನ್​ಎ ಆರೋಪಿ ತಂದೆ ಡಿಎನ್​ಎ ಜತೆ ಹೋಲಿಕೆಯಾಗಿತ್ತು. ಈ ಎಲ್ಲ ತನಿಖೆ ಪೂರ್ಣಗೊಂಡ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಪೋಕ್ಸೋ ಕಾಯ್ದೆ ಆಧಾರದ ಮೇಲೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕುಮುದಿನಿ ಪಟೇಲ್, ಪ್ರಕರಣವನ್ನು ಅಪರೂಪದಲ್ಲಿ ಅಪರೂಪ ಎಂದು ಪರಿಗಣಿಸಿ ​ ಅಪರಾಧಿಗೆ ಮರಣ ದಂಡನೆ ವಿಧಿಸಿದ್ದಾರೆ. (ಏಜೆನ್ಸೀಸ್)