ಅಪ್ರಾಪ್ತೆ ಮಗಳ ಮೇಲಿನ ಅತ್ಯಾಚಾರ ಸಾಬೀತು: ಅಪರಾಧಿಗೆ 10 ವರ್ಷ ಕಠಿಣ ಜೈಲು

ಮಂಗಳೂರು: ಅಪ್ರಾಪ್ತೆ ಪುತ್ರಿ ಮೇಲೆಯೇ ಅತ್ಯಾಚಾರವೆಸಗಿದ ಅಪರಾಧಿಗೆ(ಚಿಕ್ಕಪ್ಪ) ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ.ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಮಂಗಳೂರಿನ ಗೌರಿಮಠ ಬಳಿ ನಿವಾಸಿ ಚಂದ್ರಕಾಂತ್(44) ಶಿಕ್ಷೆಗೊಳಗಾದ ಅಪರಾಧಿ. 2018 ಮೇ 2ರಂದು ಘಟನೆ ನಡೆದಿದ್ದು, ಕ್ಷಿಪ್ರವಾಗಿ ವಿಚಾರಣೆ ನಡೆಸಿದ ನ್ಯಾಯಾಲಯ 9 ತಿಂಗಳಿನಲ್ಲಿಯೇ ತೀರ್ಪು ಪ್ರಕಟಿಸಿದೆ. ಆರೋಪಿಗೆ ಐಪಿಸಿ ಸೆಕ್ಷನ್ 376 ಮತ್ತು ೆಕ್ಸೋ ಕಾಯ್ದೆಯ ಸೆಕ್ಷನ್ 6ರಡಿ ಶಿಕ್ಷೆ ವಿಧಿಸಲಾಗಿದೆ.

ಘಟನೆಯ ಹಿನ್ನೆಲೆ: ಸಂತ್ರಸ್ತ ಬಾಲಕಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವಳು. ಆಕೆ ಅಪರಾಧಿಯ ಪತ್ನಿಯ ಅಕ್ಕನ ಮಗಳು. ಶಾಲಾ ರಜಾದಿನವಾದ್ದರಿಂದ ಮಂಗಳೂರಿನ ಗೌರಿಮಠದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಅದೇ ದಿನ ರಾತ್ರಿ 12 ಗಂಟೆ ವೇಳೆಗೆ ಬಾಲಕಿ ಚಿಕ್ಕಪ್ಪ ಚಂದ್ರಕಾಂತ್ ಆಕೆ ಮೇಲೆ ಅತ್ಯಾಚಾರವೆಸಗಿದ್ದ. ಈ ವಿಷಯ ಮನೆಯಲ್ಲಿದ್ದ ಚಂದ್ರಕಾಂತ್ ಪತ್ನಿ ಹಾಗೂ ಅಜ್ಜಿಯ ಗಮನಕ್ಕೂ ಬಂದಿತ್ತು. ಘಟನೆ ಕುರಿತು ಆರೋಪಿಯ ಪತ್ನಿ ಮರುದಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಮಹಿಳಾ ಠಾಣಾ ಇನ್‌ಸ್ಪೆಕ್ಟರ್ ಕಲಾವತಿ ತನಿಖೆ ಕೈಗೆತ್ತಿಕೊಂಡಿದ್ದರು. ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಅತ್ಯಾಚಾರ ಎಸಗಿರುವುದು ದೃಢಪಟ್ಟಿತ್ತು.

ಪ್ರತಿಕೂಲ ಹೇಳಿಕೆ ನೀಡಿದ ಸಾಕ್ಷಿಗಳು: ಪ್ರಕರಣಕ್ಕೆ ಸಂಬಂಧಿಸಿ ನೊಂದ ಬಾಲಕಿ, ಆಕೆಯ ತಾಯಿ, ಅಜ್ಜಿ, ಆರೋಪಿಯ ಪತ್ನಿ ಸೇರಿದಂತೆ 8 ಮಂದಿಯ ಸಾಕ್ಷೃ ದಾಖಲಿಸಲಾಗಿತ್ತು. ಘಟನೆ ಕುರಿತು ಪತಿಯ ವಿರುದ್ಧವೇ ದೂರು ದಾಖಲಿಸಿದ್ದ ಆತನ ಪತ್ನಿ ಬಳಿಕ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವಾಗ ಘಟನೆ ಬಗ್ಗೆ ಮಾಹಿತಿಯೇ ಇಲ್ಲವೆಂಬಂತೆ ಸುಳ್ಳು ಸಾಕ್ಷಿ ನುಡಿದಿದ್ದರು. ಅಲ್ಲದೆ ಮನೆಯವರ ಒತ್ತಡಕ್ಕೆ ಮಣಿದಿದ್ದ ಬಾಲಕಿಯೂ ತನ್ನ ಹೇಳಿಕೆ ಬದಲಿಸಿದ್ದಳು. ಆದರೆ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ಸಾಬೀತುಗೊಂಡಿದ್ದರಿಂದ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಅಲ್ಲದೆ ದಂಡದ ಮೊತ್ತ 10 ಸಾವಿರ ರೂ.ನಲ್ಲಿ 9 ಸಾವಿರ ರೂ.ನೊಂದ ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ೆಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸಿ.ವೆಂಕಟರಮಣ ಸ್ವಾಮಿ ಸರ್ಕಾರದ ಪರ ವಾದ ಮಂಡಿಸಿದ್ದರು.