ಕಾಣೆಯಾಗಿದ್ದ ಗಂಡ ಸಿಗೋದಕ್ಕೆ ಸಹಾಯವಾಗಿದ್ದು ಆ ವೈರಲ್​ ವಿಡಿಯೋ! ಅಧಿಕಾರಿಗಳ ತಪ್ಪಿನಿಂದಲೇ ಈ ಕುಟುಂಬಕ್ಕೆ ಒಳ್ಳೆಯದಾಯ್ತು!

ಇಂದೋರ್​: ಕೆಲವು ತಪ್ಪುಗಳು ಯಾವುದೋ ಒಂದು ಒಳ್ಳೆಯದಕ್ಕೆ ದಾರಿ ಮಾಡಿಕೊಡುತ್ತದೆಯಂತೆ. ಅಂತೆಯೇ ಮಧ್ಯಪ್ರದೇಶದ ಇಂದೋರ್​ ಸಿವಿಕ್​ ಬಾಡಿ ಮಾಡಿದ ಒಂದು ತಪ್ಪಿನಿಂದಾಗಿ ಒಂದು ಕುಟುಂಬ ಒಂದಾಗಿದೆ. ಗಂಡನ ಕಳೆದುಕೊಂಡು ಹುಡುಕಾಡುತ್ತಿದ್ದ ಮಹಿಳೆಯೊಬ್ಬಳಿಗೆ ಆಕೆಯ ಗಂಡ ಸಿಗುವಂತಾಗಿದೆ. ಇಂದೋರ್​ನ ಸಿವಿಕ್​ ಬಾಡಿಯು ಇತ್ತೀಚೆಗೆ ನಗರದಲ್ಲಿ ಮನೆಯಿಲ್ಲದೆ ರಸ್ತೆ ಬದಿ ಕುಳಿತಿದ್ದ ಒಂದಿಷ್ಟು ಜನರನ್ನು ಗಾಡಿಯೊಂದರಲ್ಲಿ ತುಂಬಿಕೊಂಡು ಕರೆದುಕೊಂಡು ಹೋಗಿ ನಗರದಿಂದ ಹೊರಗೆ ಬಿಟ್ಟಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿತ್ತು. ಅವರನ್ನು ಬಿಟ್ಟು ಬಂದ ಸ್ಥಳಕ್ಕೆ … Continue reading ಕಾಣೆಯಾಗಿದ್ದ ಗಂಡ ಸಿಗೋದಕ್ಕೆ ಸಹಾಯವಾಗಿದ್ದು ಆ ವೈರಲ್​ ವಿಡಿಯೋ! ಅಧಿಕಾರಿಗಳ ತಪ್ಪಿನಿಂದಲೇ ಈ ಕುಟುಂಬಕ್ಕೆ ಒಳ್ಳೆಯದಾಯ್ತು!