ಸಂಭ್ರಮಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿ ಮಗನ ಪ್ರಾಣವನ್ನೇ ತೆಗೆದ ತಂದೆ

ನವದೆಹಲಿ: ಸಂಭ್ರಮಾಚರಣೆ ವೇಳೆ ಎಂಟು ವರ್ಷದ ಮಗನನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ 42 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈಶಾನ್ಯ ದೆಹಲಿಯ ಹೊಸ ಉಸ್ಮಾನ್ಪುರದಲ್ಲಿ ನಡೆದ ಸಮಾರಂಭದಲ್ಲಿ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡು ಬಾಲಕನ ಬಲಗೆನ್ನೆಯನ್ನು ಹೊಕ್ಕಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಬಾಲಕನ ತಂದೆಯೇ ಶಂಕಿತ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆ ವೇಳೆ ಉತ್ತರಪ್ರದೇಶದ ವ್ಯಕ್ತಿಯಿಂದ ಬಂದೂಕನ್ನು ತೆಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಅಚಾನಕ್‌ ಆಗಿ ಅದು ಬಾಲಕನಿಗೆ ತಗುಲಿದೆ ಎಂದು ತಿಳಿಸಿದ್ದಾನೆ. (ಏಜೆನ್ಸೀಸ್)