ವಿವಾಹಿತ ಮಹಿಳೆಯೊಂದಿಗೆ ಓಡಿಹೋಗಿದ್ದ ವ್ಯಕ್ತಿಯೊಂದಿಗೆ ಆತನ ಸೋದರಿಯರಿಗೆ ಸಿಕ್ಕ ಉಡುಗೊರೆಯಿದು…!

ಧಾರ್‌: ವಿವಾಹಿತ ಮಹಿಳೆಯೊಂದಿಗೆ ಓಡಿಹೋಗಿದ್ದಕ್ಕೆ ವ್ಯಕ್ತಿ ಮತ್ತು ಅಪ್ರಾಪ್ತೆ ಸೇರಿ ಆತನ ಇಬ್ಬರು ಸೋದರಿಯನ್ನು ಮರಕ್ಕೆ ಕಟ್ಟಿ ಗಂಟೆಗಟ್ಟಲೆ ಹೊಡೆದಿರುವ ಘಟನೆ ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿ ನಡೆದಿದೆ.

ಇದಲ್ಲದೆ ಮಹಿಳೆಯ ಪತಿ ಸೇರಿ ಇತರರು ಇಬ್ಬರು ಸೋದರಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಮುಖೇಶ್‌ ಎಂಬವರ ಹೆಂಡತಿಯೊಂದಿಗೆ ಓಡಿಹೋಗಿದ್ದ. ಇಬ್ಬರು ಓಡಿ ಹೋದ ಬಳಿಕ ಮುಖೇಶ್‌ ಕರೆಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಧಾರ್‌ ಜಿಲ್ಲೆಯ ಅರ್ಜುನ್‌ ಕಾಲೋನಿಯಲ್ಲಿರುವ ತಮ್ಮ ನಿವಾಸಕ್ಕೆ ಬರುವಂತೆ ಕರೆದಿದ್ದಾರೆ. ಬಳಿಕ ಬಂದು ಮಾತನಾಡುವಾಗ ಮುಖೇಶ್‌ ವ್ಯಕ್ತಿ ಮತ್ತು ಆತನೊಂದಿಗೆ ವಾಸವಿದ್ದ ಇಬ್ಬರು ಸೋದರಿಯರನ್ನು ಮರಕ್ಕೆ ಕಟ್ಟಿ ಕೋಲಿನಿಂದ ಹೊಡೆದಿದ್ದಾರೆ.

ಹಲವಾರು ಸ್ಥಳೀಯರು ಘಟನೆಯನ್ನು ನೋಡುತ್ತಾ ನಿಂತಿದ್ದಾರೆ. ಇನ್ನು ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಒಂದೆಡೆ ಮರಕ್ಕೆ ಕಟ್ಟಿ ಒಡೆಯುತ್ತಿದ್ದವರು ನೋವಿನಿಂದ ಚೀರುತ್ತಿದ್ದರೆ, ಮತ್ತೊಂದೆಡೆ ಜನರ ಮಧ್ಯೆಯಿಂದ ಮಹಿಳೆಯು ನೋವಿನಿಂದ ಚೀರಾಡುತ್ತಿದ್ದ ದೃಶ್ಯ ಕಂಡುಬಂದಿದೆ.

ಮುಕೇಶ್‌ ಅವರ ಕುಟುಂಬಸ್ಥರು ಘಟನೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಅಪ್ರಾಪ್ತೆಗೂ ಸೇರಿಸಿ ಒಡೆದಿರುವುದರಿಂದಾಗಿ ಭಾರತೀಯ ದಂಡ ಸಂಹಿತೆ ಮತ್ತು ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವವರನ್ನು ಕೂಡಲೇ ಬಂಧಿಸಲಾಗುತ್ತದೆ ಎಂದು ಎಸ್‌ಪಿ ಸಂಜೀವ್‌ ಮುಲೆ ತಿಳಿಸಿದ್ದಾರೆ. (ಏಜೆನ್ಸೀಸ್)