blank

ದಿನಕ್ಕೆ 3.3 ಲೀಟರ್​ ಮೂತ್ರ ಸೇವನೆ; ಕಣ್ಣು, ಮೂಗಿನಿಂದಲೂ ಒಳಗೆಳೆದುಕೊಳ್ತಾನೆ; ಮೈಗೆಲ್ಲ ಉಜ್ಜಿಕೊಳ್ತಾನೆ…!

blank

ಹ್ಯಾಂಬರ್ಗ್​: ಇಲ್ಲೊಬ್ಬ ವ್ಯಕ್ತಿ ಪ್ರತಿದಿನ ಏಳು ಪಿಂಟ್​ಗಳಷ್ಟು (ಅಂದಾಜು 3.3 ಲೀಟರ್​) ತನ್ನದೇ ಮೂತ್ರವನ್ನು ಕುಡಿಯುತ್ತಾನೆ. ಜತೆಗೆ, ಕಣ್ಣು, ಕಿವಿ, ಮೂಗಿನಿಂದೆಲ್ಲ ಒಳಗೆಳೆದುಕೊಳ್ತಾನೆ….! ಅಚ್ಚರಿಯಾದರೂ ಇದು ಸತ್ಯ.

ಜರ್ಮನಿಯ ಹ್ಯಾಂಬರ್ಗ್​ನಲ್ಲಿರುವ ವಿದ್ಯಾರ್ಥಿ ಹಾಗೂ ಕ್ರೀಡಾ ತರಬೇತುದಾರನಾಗಿರುವ 26 ವರ್ಷದ ಜನ್​ ಶುನೆಮನ್​ಗೆ ಈ ಹವ್ಯಾಸವಿದೆ. ಇದರಿಂದ ನನಗೆ ಮಾನಸಿಕ ಒತ್ತಡ ಹಾಗೂ ಖಿನ್ನತೆಯನ್ನು ನಿವಾರಿಸುವಲ್ಲಿ ನೆರವಾಗಿದೆ ಎನ್ನುತ್ತಾನೆ.

ಇದನ್ನೂ ಓದಿ; ಫ್ಲ್ಯಾಟ್​ನ ಕಿಟಕಿ ಹಾಕದೇ ಊರಿಗೆ ಹೋಗಿದ್ದ; ಐದು ತಿಂಗಳ ಬಳಿಕ ಮನೆ ನೋಡಿದವನಿಗೆ ಕಾದಿತ್ತು ಶಾಕ್​…!

ಭಾರತೀಯರಿಗೆ ಸ್ವಮೂತ್ರಪಾನ ಅಥವಾ ಶಿವಂಬು ಕಲ್ಪ ಹೊಸದೇನಲ್ಲ. ಇವನಿಗೆ ಈ ಬಗ್ಗೆ ಗೊತ್ತಾಗಿದ್ದು 2017ರಲ್ಲಂತೆ. ಪ್ರತಿದಿನ ಮೂರರಿಂದ ಏಳು ಪಿಂಟ್​ಗಳಷ್ಟು ಮೂತ್ರ ಸೇವಿಸುವ ಈತ ಸಿರಿಂಜ್​ ಮೂಲಕ ಕಿವಿಗೆ ಹಾಕಿಕೊಳ್ಳುತ್ತಾನೆ. ಗ್ಲಾಸ್​ ಮೂಲಕ ಕಣ್ಣಿಗೂ ಸುರಿದುಕೊಳ್ತಾನೆ. ಅಷ್ಟೇ ಅಲ್ಲ, ಮೈಗೆಲ್ಲ ಮೂತ್ರವನ್ನು ಉಜ್ಜಿಕೊಳ್ತಾನೆ.

ಮೂತ್ರ ಚಿಕಿತ್ಸೆ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ ಹಾಗೂ ಕಾಯಿಲೆಯನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ. ಶಿವಂಬು ಕಲ್ಪದ ಬಗ್ಗೆ ನಾನು ಇಂಟರ್​ನೆಟ್​ ಮೂಲಕ ತಿಳಿದುಕೊಂಡೆ. ಇದರ ಬಗ್ಗೆ ಮುಕ್ತ ಮನಸ್ಸಿನವನಾಗಿದ್ದೆ. ಈ ಪದ್ಧತಿಯನ್ನೂ ಕೂಡಲೇ ಆಂಭಿಸಿದೆ. ಇದರಿಂದ ಅನೇಕ ಪ್ರಯೋಜನಗಳಾಗಿವೆ. ಹೀಗಾಗಿ ಇದನ್ನು ಮುಂದುವರಿಸುತ್ತಿದ್ದೇನೆ ಎಂದು ಶುನೆಮನ್ ಹೇಳುತ್ತಾನೆ

ಇದನ್ನೂ ಓದಿ; ಗ್ರಾಹಕರ ಬ್ಯಾಂಕ್​ ಖಾತೆಗೆ ಬರಲ್ಲ ಎಲ್​ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ?

ಇದು ನನ್ನನ್ನು ಆರೋಗ್ಯವಂತನನ್ನಾಗಿಸಿದೆ, ಹೆಚ್ಚು ಶಕ್ತಿಯನ್ನು ಕೊಡುತ್ತೆ. ನನಗೀಗ ದಿನಕ್ಕೆ ನಾಲ್ಕರಿಂದ ಏಳು ಗಂಟೆ ನಿದ್ರೆ ಸಾಕಾಗುತ್ತದೆ. ಇದು ಎಲ್ಲ ಕಾಯಿಲೆ ಹಾಗೂ ವೈರಸ್​ಗಳಿಗೆ ಪಕ್ಕಾ ಔಷಧವಾಗಿದೆ. ದೇಹಕ್ಕೆ ತನ್ನದೇ ಆದ ಪ್ರತಿರೋಧಕ ಶಕ್ತಿಯನ್ನು ಇದು ಉಂಟು ಮಾಡುತ್ತದೆ ಎಂದು ಶುನೆಮನ್ ವಿವರಿಸುತ್ತಾನೆ. ಶಿವಂಬು ಕಲ್ಪದಿಂದ ಉಂಟಾಗಿರುವ ಅನುಭವಗಳನ್ನು ಯೂಟ್ಯೂಬ್​ ಹಾಗೂ ಇನ್​ಸ್ಟಾಗ್ರಾಂ ಮೂಲಕ ಜನರಿಗೆ ಹಂಚಿಕೊಳ್ಳುತ್ತಾನೆ.

ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…