ಶಿವಮೊಗ್ಗ: ಮಂಗನ ಕಾಯಿಲೆ ಸಂಬಂಧಿಸಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಲಚ್ಚು ಪೂಜಾರಿ (77) ಮೃತಪಟ್ಟವರಾಗಿದ್ದಾರೆ. ಇಂದು ಮುಂಜಾನೆ ನಿಧನರಾದರು. ಇವರಿಗೆ ಮಂಗನಕಾಯಿಲೆ ಇರುವುದು ಖಾತ್ರಿಯಾಗಿತ್ತು. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ, ತೀರ್ಥಹಳ್ಳಿ ತಾಲೂಕಿನ 100 ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದು, ಆಸ್ಪತ್ರೆಯಲ್ಲಿ ಇದು ಎರಡನೇ ಮೃತಪಟ್ಟ ಪ್ರಕರಣವಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗು ಮಂಗನ ಕಾಯಿಲೆ ಮನುಷ್ಯರಲ್ಲಿ ಕಾಣಿಸಿಕೊಂಡಿಲ್ಲ.