More

  ಕೊಪ್ಪಳದಲ್ಲಿ ಸಾಲಬಾಧೆಯಿಂದ ವ್ಯಕ್ತಿ ಆತ್ಮಹತ್ಯೆ

  ಕೊಪ್ಪಳ: ತಾಲೂಕಿನ ಇಂದರಿಗಿ ಗ್ರಾಮದ ದುರ್ಗಪ್ಪ ಹಂಚಿನಾಳ‌(48) ಸಾಲಬಾಧೆ ತಾಳದೆ ಸೋಮವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  ಮೃತನು ಇರಕಲ್ ಗಡಾದ ಗಂಗಾ ಕಾವೇರಿ ಬ್ಯಾಂಕಿನಲ್ಲಿ ಮನೆ ಕಟ್ಟುವ ಸಲುವಾಗಿ ಒಂದು ಲಕ್ಷ‌ ರೂ. ಸಾಲ ಮಾಡಿಕೊಂಡಿದ್ದಾನೆ. 50 ಸಾವಿರ ರೂ. ಮರು ಪಾವತಿ ಮಾಡಿದ್ದು, ಇನ್ನು 50 ಸಾವಿರ ರೂ. ಕಟ್ಟಬೇಕು.

  ಇದರಿಂದ ಮನನೊಂದು ಮಾನಸಿಕವಾಗಿ ಕುಗ್ಗಿದ್ದ. ಇದೇ ಚಿಂತೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ನೀಡಿದ ದೂರಿನ ಅನ್ವಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts