More

    ಹೋರಿ ತಿವಿದು ಸಂಘಟಕ ಸಾವು

    ಹಿರೇಕೆರೂರ: ತಾಲೂಕಿನ ಕೋಡ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಹಬ್ಬದಲ್ಲಿ ವ್ಯಕ್ತಿಯೋರ್ವನಿಗೆ ಹೋರಿ ತಿವಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಂಭವಿಸಿದೆ.

    ಹೋರಿ ಬೆದರಿಸುವ ಅಖಾಡದಲ್ಲಿ ಸಾರ್ವಜನಿಕರನ್ನು ನಿಯಂತ್ರಿಸುವ ವೇಳೆ ಸ್ಪರ್ಧೆ ಆಯೋಜನೆಯ ಕಮಿಟಿ ಸದಸ್ಯ ಶಿವಪ್ಪ ಹುಚ್ಚಪ್ಪ ಮಲ್ಲೂರು(34) ಎಂಬುವನಿಗೆ ಏಕಾಏಕಿ ಬಂದು ಹೋರಿ ಎದೆಗೆ ತಿವಿದಿತ್ತು. ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದರೆ ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಸಂಜೆಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

    ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿಯನ್ನು ಯಾವುದೇ ಪೊಲೀಸ್ ಹಾಗೂ ಕಂದಾಯ ಇಲಾಖೆಯಿಂದ ಅನುಮತಿ ಕೊಡದೇ ಇದ್ದರೂ ಜಿಲ್ಲೆಯಾದ್ಯಂತ ದೀಪಾವಳಿ ಪಾಡ್ಯದಿಂದ ಈ ಸ್ಪರ್ಧೆಗಳು ರಾಜಾರೋಷವಾಗಿ ನಡೆಯುತ್ತಲೇ ಇವೆ. ಪ್ರತಿವರ್ಷ ಸ್ಪರ್ಧೆಯಲ್ಲಿ ಅನೇಕರು ಬಲಿಯಾಗುತ್ತಿದ್ದಾರೆ. ಅನೇಕರು ಗಾಯಗೊಳ್ಳುತ್ತಿದ್ದಾರೆ. ಆದರೆ ಇದಕ್ಕೆ ಕಂದಾಯ ಹಾಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಲು ವಿಫಲವಾಗಿದೆ. ಇದನ್ನು ನಿಯಂತ್ರಿಸಲು ಜನರು ಸಹ ಸಹಕಾರ ನೀಡದೇ ಇರುವುದರಿಂದ ಪೊಲೀಸ್ ಇಲಾಖೆಯೂ ನಿಸ್ಸಾಹಕವಾಗಿದೆ. ಸ್ಪರ್ಧೆಯಲ್ಲಿ ಅವಘಡಗಳು ಸಂಭವಿಸಿದಾಗ ಆ ಕುರಿತು ಪೊಲೀಸ್ ಠಾಣೆಯಲ್ಲಿ ಬೇರೆ ರೀತಿಯ ದೂರುಗಳು ದಾಖಲಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts