ಮಧ್ಯರಾತ್ರಿ ಹೆಂಡತಿಗೆ ವಿಡಿಯೋ ಕಾಲ್‌ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ, ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ!

ಭೋಪಾಲ್‌: ತನ್ನ ಹೆತ್ತವರೊಂದಿಗೆ ಜನ್ಮಾಷ್ಟಮಿ ದಿನವನ್ನು ಕಳೆಯಲು ಬಯಸಿದ್ದ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಮಧ್ಯಪ್ರದೇಶದ 35 ವರ್ಷದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂತ್ರಸ್ತನನ್ನು ಉಮೇಶ್‌ ಎಂದು ಗುರುತಿಸಲಾಗಿದ್ದು, ಮಧ್ಯಪ್ರದೇಶದ ಭೋಪಾಲ್‌ನ ಜಹಂಗಿರ್‌ಬಾದ್‌ ನಿವಾಸಿಯಾಗಿದ್ದಾರೆ.

ಗುರುವಾರ ರಾತ್ರಿ ಉಮೇಶ್‌ ತನ್ನ ಹೆಂಡತಿ ಆರತಿಯೊಂದಿಗೆ ಆಕೆಯ ಪಾಲಕರ ಮನೆಯಲ್ಲೇ ಜಗಳವಾಡಿಕೊಂಡಿದ್ದಾನೆ. ರಕ್ಷಾ ಬಂಧನದ ದಿನದಂದು ತವರು ಮನೆಗೆ ತೆರಳಬೇಕು ಎಂದು ಬಯಸಿದ್ದ ಆರತಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕೃಷ್ಮ ಜನ್ಮಾಷ್ಟಮಿಯಂದು ತವರು ಮನೆಗೆ ತೆರಳಲು ಒತ್ತಾಯಿಸಿದ್ದಳು. ಹೀಗಾಗಿ ಪತ್ನಿ ಮತ್ತು ತನ್ನಿಬ್ಬರು ಮಕ್ಕಳನ್ನು ಬೆರಾಸಿಯದಲ್ಲಿದ್ದ ಅತ್ತೆ ಮನೆಗೆ ಕರೆದೊಯ್ದಿದ್ದ. ಆರತಿಯೊಂದಿಗೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಅಲ್ಲಿಂದ ತನ್ನ ಮನೆಗೆ ಏಳು ವರ್ಷದ ಮಗನೊಂದಿಗೆ ಉಮೇಶ್‌ ಹಿಂತಿರುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯರಾತ್ರಿ ವೇಳೆ ಉಮೇಶ್‌ ತನ್ನ ಹೆಂಡತಿಗೆ ವಾಟ್ಸ್‌ಆ್ಯಪ್‌ ವಿಡಿಯೋ ಕಾಲ್‌ ಮಾಡಿದ್ದಾನೆ. ಈ ವೇಳೆ ನೇಣು ಬಿಗಿದುಕೊಂಡಿದ್ದಾನೆ. ಕೂಡಲೇ ಉಮೇಶನ ತಮ್ಮ ರಾಜುವಿಗೆ ಆರತಿ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆತ ಬಾಗಿಲು ಒಡೆದು ಒಳನುಗ್ಗುವಷ್ಟರಲ್ಲಿ ಉಮೇಶ್‌ ಕೊನೆಯುಸಿರೆಳೆದಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಉಮೇಶ್‌ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಟ್ಸ್ ವ್ಯಾಪಾರಿಯಾಗಿದ್ದ ಉಮೇಶನ ಕುಟುಂಬದಲ್ಲಿ ಕಡಿಮೆ ಆದಾಯದ ಕಾರಣಕ್ಕಾಗಿ ಮನಸ್ತಾಪವಿತ್ತು ಎಂದು ಹೇಳಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *