ಆಸ್ಪತ್ರೆಯಲ್ಲಿದ್ದ ವಿವಾಹಿತ ಪ್ರೇಯಸಿಯನ್ನು ತಡರಾತ್ರಿಯಲ್ಲಿ ಅಪ್ಪಿಕೊಂಡವ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳ್ಕೊಂಡ!

ರಾಜಸ್ಥಾನ: ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಬೇರೆಯವರನ್ನು ಮದುವೆಯಾಗಿದ್ದರೂ ಅವಳನ್ನು ನೋಡಲು ತಡರಾತ್ರಿಯಲ್ಲಿ ಹೋಗಿ, ಅವಳೊಂದಿಗೆ ಮಾತನಾಡಿ, ಆಕೆಯನ್ನು ಅಪ್ಪಿಕೊಂಡ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳೆದುಕೊಂಡಂತಹ ಅಪರೂಪದ ಪ್ರಕರಣವೊಂದು ನಡೆದಿದೆ. ರಾಜಸ್ಥಾನದ ಭರತ್​ಪುರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಪ್ರಿಯಕರ ಚಂದ್ರಪಾಲ್​ (22) ಸಾವಿಗೀಡಾದ ವ್ಯಕ್ತಿ. ಇಕರಾನ್​ನ ನಿವಾಸಿಯಾಗಿದ್ದ ಈತ ತನ್ನ ಪ್ರೇಯಸಿ ಬೇರೆಯವರನ್ನು ಮದುವೆಯಾಗಿದ್ದರೂ ಆಕೆ ಆಸ್ಪತ್ರೆಯಲ್ಲಿರುವಾಗ ತಡರಾತ್ರಿಯಲ್ಲಿ ಅವಳಿದ್ದಲ್ಲಿಗೆ ತೆರಳಿ ಭೇಟಿಯಾಗುವ ಸಾಹಸವನ್ನು ಮಾಡಿದ್ದಾನೆ. ಬುಧವಾರ ಬೆಳಗಿನ ಜಾವ 2.30ರ ಸಮಯದಲ್ಲಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ. … Continue reading ಆಸ್ಪತ್ರೆಯಲ್ಲಿದ್ದ ವಿವಾಹಿತ ಪ್ರೇಯಸಿಯನ್ನು ತಡರಾತ್ರಿಯಲ್ಲಿ ಅಪ್ಪಿಕೊಂಡವ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳ್ಕೊಂಡ!