ಮಾರ್ಗ ಮಧ್ಯೆಯೇ ಯುವತಿಯ ಮೇಲೆ ಮಚ್ಚಿನಿಂದ ದಾಳಿ ಮಾಡಿದ ಯುವಕ; ಬೆಚ್ಚಿಬಿದ್ದ ಸಾರ್ವಜನಿಕರು!

ಕೊಚ್ಚಿ: ಯುವಕನೊಬ್ಬ ಹಾಡಹಗಲೇ ಯುವತಿಯ ಮೇಲೆ ರಸ್ತೆ ಮಧ್ಯೆಯೇ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ದಾಳಿಯನ್ನು ನೋಡಿ ಇಡೀ ಸಾರ್ವಜನಿಕರು ಬೆಚ್ಚಿ ಬೀಳುವಂತಾಗಿದೆ. ಈ ಘಟನೆಯು ಕಲೂರಿನ ಆಜಾದ್ ರಸ್ತೆಯಲ್ಲಿ ನಡೆದಿದೆ. ಮಾರ್ಗಮಧ್ಯೆ ಯುವಕ ಮತ್ತು ಇಬ್ಬರು ಯುವತಿಯರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಯುವಕ, ಮಚ್ಚಿನಿಂದ ಯುವತಿಯ ತಲೆ ಮೇಲೆ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಆಕೆಯ ಸ್ನೇಹಿತೆ, ಯುವತಿಯನ್ನು ರಕ್ಷಿಸುವಲ್ಲಿ ನೆರವಾಗಿದ್ದಾಳೆ. ಸದ್ಯ ಯುವತಿಯ ಕೈಗೆ ಗಾಯವಾಗಿದ್ದು, ಆಸ್ಪತ್ರೆ ಸೇರಿದ್ದಾಳೆ. ಸ್ನೇಹಿತೆ ತಡೆದ ಕಾರಣದಿಂದ … Continue reading ಮಾರ್ಗ ಮಧ್ಯೆಯೇ ಯುವತಿಯ ಮೇಲೆ ಮಚ್ಚಿನಿಂದ ದಾಳಿ ಮಾಡಿದ ಯುವಕ; ಬೆಚ್ಚಿಬಿದ್ದ ಸಾರ್ವಜನಿಕರು!