More

  ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಗಂಡ! ಇಷ್ಟಕ್ಕೆಲ್ಲ ಕಾರಣವಾಗಿದ್ದು ಏನು ಗೊತ್ತಾ?

  ಪಟನಾ: ಏಳೇಳು ಜನ್ಮ ಜತೆಯಾಗಿ ಬದುಕುವ ಪ್ರಮಾಣ ಮಾಡಿ ಮದುವೆಯಾಗಿದ್ದ ಗಂಡ ಹೆಂಡತಿಯನ್ನು ಕೊಲೆ ಮಾಡಿ ತಾನೂ ಬಿಲ್ಡಿಂಗ್​ನಿಂದ ಹಾರಿ ಪ್ರಾಣ ಬಿಟ್ಟಿರುವ ಘಟನೆ ಬಿಹಾರದ ಪಟನಾದಲ್ಲಿ ನಡೆದಿದೆ. ಈ ಕೃತ್ಯಕ್ಕೆ ಕಾರಣ ಆತನ ಹೆಂಡತಿ ಕರೊನಾ ಸೋಂಕಿಗೆ ತುತ್ತಾಗಿದ್ದು ಎನ್ನಲಾಗಿದೆ.

  ಅತುಲ್​ ಲಾಲ್​ ಹೆಸರಿನ ವ್ಯಕ್ತಿ ಪಟನಾದ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ ಆತನ ಪತ್ನಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಅದಾದ ಮೇಲೆ ದಂಪತಿ ನಡುವೆ ಜಗಳ ಆರಂಭವಾಗಿದೆ. ಅದೇ ಸಿಟ್ಟಿನಿಂದ ಕೋವಿಡ್​ ಪಾಸಿಟಿವ್ ಹೆಂಡತಿಯ ಕುತ್ತಿಗೆಯನ್ನು ಅತುಲ್​ ಲಾಲ್​ ಬ್ಲೇಡ್​ನಿಂದ ಕತ್ತರಿಸಿದ್ದಾನೆ. ನಂತರ ಅಪಾರ್ಟ್​ಮೆಂಟ್​ನ ನಾಲ್ಕನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾನೆ.

  ಅಘಾತಕಾರಿ ವಿಚಾರ ಏನೆಂದರೆ ಈ ದಂಪತಿಗೆ ಮಕ್ಕಳಿದ್ದು, ಅವರ ಎದುರೇ ಈ ಕೃತ್ಯ ನಡೆದಿದೆ. ಪೊಲೀಸರು ಮೃತ ದೇಹಗಳನ್ನು ಮರಣೋತ್ತ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. (ಏಜೆನ್ಸೀಸ್)

  ‘ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ​ ದಾಖಲಿಸಬೇಕು’ ಅಸಮಾಧಾನ ಹೊರಹಾಕಿದ ಹೈ ಕೋರ್ಟ್

  ಎಲ್ಲ ಪದವೀಧರರಿಗೂ ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ ಭರ್ಜರಿ ಅವಕಾಶ: 511 ಹುದ್ದೆಗಳಿಗೆ ಆಹ್ವಾನ- ನಾಲ್ಕೇ ದಿನ ಬಾಕಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts